ಹಾವೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ, ಹಾನಗಲ್ ಶಾಸಕ ಸಿಎಂ ಉದಾಸಿ (85) ನಿಧನರಾಗಿದ್ದಾರೆ.
ಸಿಎಂ ಉದಾಸಿ ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಅಂತ್ಯಕ್ರಿಯೆ
ನಾಳೆ ಬೆಳಗ್ಗೆ ಪಾರ್ಥಿವ ಶರೀರವನ್ನು ಹಾನಗಲ್‌ಗೆ ತೆಗೆದುಕೊಂಡು ಹೋಗುತ್ತೇವೆ. ಸದ್ಯ ಕೋವಿಡ್ ಪರಿಸ್ಥಿತಿ ಇರೋದ್ರಿಂದ ಮನೆಗೆ ಪಾರ್ಥಿವ ಶರೀರವನ್ನು ತರಲ್ಲ. ಈಗಷ್ಟೇ ಅವರು ನಿಧನರಾದ ಹಿನ್ನೆಲೆಯಲ್ಲಿ ಒಬ್ಬೊಬ್ಬರಿಗೆ ಮಾಹಿತಿ ಮುಟ್ಟಿಸಲಾಗುತ್ತಿದೆ. ಮುಖ್ಯಮಂತ್ರಿಗಳು ಬರುತ್ತಾರೋ, ಇಲ್ಲವೋ ಮಾಹಿತಿ ಇಲ್ಲ. ನಾಳೆ ಬೆಳಗ್ಗೆ 6 ಗಂಟೆಗೆ ಇಲ್ಲಿಂದ ಹಾನಗಲ್‌ಗೆ ಹೊರಡುತ್ತೇವೆ. ನಾಳೆ ಅಂತ್ಯಕ್ರಿಯೆ ಮಾಡ್ತೇವೆ ಎಂದು ಹಾವೇರಿ ಲೋಕಸಭಾ ಬಿಜೆಪಿ ಸಂಸದ ಹಾಗೂ ಸಿ.ಎಂ.ಉದಾಸಿ ಪುತ್ರ ಶಿವಕುಮಾರ್ ಉದಾಸಿ ಮಾಹಿತಿ ನೀಡಿದ್ದಾರೆ.