ಪುತ್ತೂರು : ಗ್ರಾಮ ಪಂಚಾಯತ್ ಸದಸ್ಯರ ನಡುವೆ ಭಿನ್ನಮತ ಉಂಟಾಗಿ ಆರ್ಯಾಪು ಕುರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತ್ಯಾಧಿಕ ಬಹುಮತದಿಂದ ಜಯಗಳಿಸಿದ ಯಾಕೂಬ್ ರವರು ರಾಜೀನಾಮೆ ನೀಡುವುದಾಗಿದೆ ರಾಜೀನಾಮೆ ಪತ್ರವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಿಗೆ ಸಲ್ಲಿಸಿದ್ದರು.
ಈ ನಿಟ್ಟಿನಲ್ಲಿ ಯಾಕೂಬ್ ರವರನ್ನು ತುರ್ತು ಭೇಟಿ ಮಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ್ ರೈ ಅವರ ಮನವೊಲಿಸಿ ರಾಜೀನಾಮೆ ಪತ್ರವನ್ನು ಹಿಂತೆಗಿಸಿದ್ದು ಬಳಿಕ ZOOM.IN TV ಜೊತೆ ಮಾತನಾಡಿದ ಎಂ.ಬಿ ವಿಶ್ವನಾಥ ರೈಯವರು ಕಾಂಗ್ರೆಸ್ ನ ಪ್ರತಿ ಕಾರ್ಯಕರ್ತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುವುದು ನನ್ನ ಮೊದಲ ಆದ್ಯತೆ ಎಂದು ತಿಳಿಸಿದರು. ಅಧ್ಯಕ್ಷರ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸದಸ್ಯರ ತೊಂದರೆಗಳಿಗೆ ಸ್ಪಂದಿಸುವ ಇವರ ನಡೆಗೆ ಕಾಂಗ್ರೆಸ್ ಪಾಳಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂಧರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಅಲಿ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸನತ್ ರೈ ಎಳ್ನಾಡುಗುತ್ತು,ಸಿಂಬ್ರಾನ್ ಉಪಸ್ತಿತರಿದ್ದರು.