ಪುತ್ತೂರು : ಪುತ್ತೂರು ನಗರ ಸಂಚಾರಿ ಪೊಲೀಸ್ ಸ್ಟೇಷನ್ ನ ಆರಕ್ಷಕರಾದ ಸ್ಕರಿಯ ಅವರು ತಮ್ಮ ಜನುಮ ದಿನವನ್ನು ಭಾರೀ ವಿಶೇಷವಾಗಿ ಆಚರಿಸಿಕೊಂಡರು.
ಜೂ. 9 ರಂದು ಹುಟ್ಟುಹಬ್ಬದ ಆಚರಿಸಿಕೊಂಡ ಅವರು, ಜನುಮದಿನವನ್ನು ನೊಂದವರಿಗೆ ನೆರವಾಗುವ ಮೂಲಕ ಆಚರಿಸಿಕೊಂಡಿದ್ದು ಶ್ಲಾಘನೀಯವಾಗಿತ್ತು, ಸ್ಕರಿಯ ಅವರು ಹೆಚ್ಎಂಸಿ ಸಂಘಟನೆ ಜತೆ ಸೇರಿಕೊಂಡು ಪುತ್ತೂರು ಭಾಗದ ಹಲವು ಬಡಕುಟುಂಬಗಳಿಗೆ ಸಂಘಟನೆಯು ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುತ್ತಿದ್ದಂತೆ ತಾವು ಸ್ವತಃ ತಮ್ಮ ಪ್ರಾಮಾಣಿಕ ಸೇವೆಯಿಂದ ದುಡಿದ ಧನಸಹಾಯವನ್ನು ಮಾಡಿದರು.
ಆರಕ್ಷಕರು ಬರೀ ರಸ್ತೆ ಬದಿ ನಿಂತು ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ತಮಗೂ ಕುಟುಂಬವಿದ್ದರೂ ಅದನ್ನೂ ಲೆಕ್ಕಿಸದೆ ಸೇವೆಗೈಯುತ್ತಿದ್ದಾರೆ. ಆದರೆ ಇವತ್ತಿಗೂ ಆರಕ್ಷಕರ ಕಟ್ಟುನಿಟ್ಟಿನ ಕ್ರಮಗಳನ್ನು ದೂಷಿಸುವವರ ಸಂಖ್ಯೆಯೇ ಹೆಚ್ಚು. ಇಲ್ಲೊಬ್ಬರು ಆರಕ್ಷಕರು ಈ ಕರ್ತವ್ಯದ ಜತೆಗೆ ತನ್ನ ಮಾನವೀಯ ಕರ್ತವ್ಯವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇಂದಿನ ಕಾಲದಲ್ಲಿ ಹಣ ಅಂದಾ ಕ್ಷಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವವರ ನಡುವೆಯೂ ಇಂತಹ ಹಲವು ಜನರು ಕೊರೊನಾ ವಾರಿಯರ್ಸ್ ಗಳಾಗಿ ಕೇವಲ ಆರಕ್ಷಕ ಠಾಣೆಯಲ್ಲಿ ದುಡಿಯುತ್ತಿರುವುದಲ್ಲದೆ ಇದರ ಜತೆಗೆ ತಮ್ಮ ಕೈಲಾದ ನೆರವನ್ನು ಕೂಡಾ ನೀಡುತ್ತಿದ್ದು, ಇಂತಹ ಸೇವಾಕರ್ತರಿಗೆ ತಲೆಬಾಗಲೇಬೇಕು.