ಪುತ್ತೂರು : ಲಾಕ್ ಡೌನ್ ಜಾರಿಯಲ್ಲಿದ್ದರೂ, ಜನ ಅನಾವಶ್ಯಕವಾಗಿ ಪೇಟೆಗೆ ಬರುತ್ತಿರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ತಪಾಸಣೆ ಬಿಗಿಗೊಳಿಸುವಂತೆ ನೀಡಿದ ಆದೇಶದ ಮೇರೆಗೆ ಪೊಲೀಸರು ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ ಅನಾವಶ್ಯಕ ವಾಗಿ ಬರುವ ವಾಹನಗಳಿಗೆ ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಪುತ್ತೂರಿನ ಮುಕ್ರಂಪಾಡಿ ಬೈಪಾಸ್ ಚೆಕ್ ಪೋಸ್ಟ್ ನಲ್ಲಿ ಬೆಳ್ಳಂಬೆಳಗ್ಗೆಯೇ ಸಂಚಾರಿ ಠಾಣಾ ಪೊಲೀಸರು ಬಿರುಸಿನ ತಪಾಸಣೆ ನಡೆಸುತ್ತಿದ್ದು, ಪ್ರತಿ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಟ್ರಾಫಿಕ್ ಜಾಮ್ ಆಗಿದ್ದು,ವಾಹನಗಳು ಸಾಲು ಗಟ್ಟಿ ಪೇಟೆಗೆ ಬರಲು ನಿಂತಿದ್ದ ದೃಶ್ಯಗಳು ಕಂಡು ಬಂದಿತು. ಕೆಲ ವಾಹನಗಳಿಗೆ ದಂಡ ಕೂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.