ಪುತ್ತೂರು ಕಡೆಯಿಂದ ಬರುತ್ತಿದ್ದ ಕೃಷಿಕೂಲಿ ಕಾರ್ಮಿಕರಿದ್ದ ಪಿಕಪ್ ವಾಹನಕ್ಕೆ ಕಂಟೈನರ್ ಲಾರಿಯೊಂದು ಅತಿವೇಗದಿಂದ ಬಂದು ಡಿಕ್ಕಿ ಹೊಡೆದು ಐವರು ಗಾಯಗೊಂಡಿದ್ದರು. ತೀವ್ರ ಗಾಯಗೊಂಡಿದ್ದ ಪಿಕಪ್ ಚಾಲಕ ದಿನಕರ್ ಮತ್ತಿತರರನ್ನು ಕೆ.ವಿ.ಜಿ. ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ದಿನಕರ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ದಿನಕರ್ ( 32 ) ಪೆರಾಜೆಯ ಕುಂಬಳಚೇರಿಯವರಾಗಿದ್ದು ಪುತ್ತೂರು ಕುಂಬ್ರದ ಬಳಿ ಇರುವ ಡಾ.ಲೀಲಾಧರ್ ಸಹೋದರರ ತೋಟದಲ್ಲಿ ಪಿಕಪ್ ಚಾಲಕರಾಗಿದ್ದರೆನ್ನಲಾಗಿದೆ. ಕೃಷಿ ಕೆಲಸಗಾರರು ಕೆಲಸ ಬಿಟ್ಟು ಸುಳ್ಯಕ್ಕೆ ಬರುವಾಗ ದಿನಕರ್ ಕೂಡ ಜತೆಗೆ ಬರುತ್ತಿದ್ದರು.