ಕಲ್ಲಡ್ಕ : ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಕೆಲಿಂಜ ಪಾಲ್ತಿಮಾರ್ ಹಾಗೂ ಪಾತ್ರ ತೋಟದ ಸುತ್ತಮುತ್ತಲಿನ ಮನೆಯವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ವೀರಕಂಭ ಪಂಚಾಯತಿನ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸಹಕಾರದೊಂದಿಗೆ ಆರೋಗ್ಯ ತಪಾಸಣೆ ಮತ್ತು ಕೋವಿಡ್ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆರ್. ಬಿ. ಎಸ್. ಕೆ .ವೈದ್ಯಾಧಿಕಾರಿ ಡಾಕ್ಟರ್ ನಿಶ್ಮಿತಾ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಶ್ರೀಮತಿ ಕುಸುಮ, ವೀರಕಂಭ ಗ್ರಾಮ ವ್ಯಾಪ್ತಿಯ ಆರೋಗ್ಯ ಸಹಾಯಕಿ ಶ್ರೀಮತಿ ಜ್ಯೋತಿ ಕೆ, ಲ್ಯಾಬ್ ಟೆಕ್ನಿಷಿಯನ್ ಶ್ರೀಮತಿ ಪ್ರೇಮ, ಆಶಾ ಕಾರ್ಯಕರ್ತೆ ಶ್ರೀಮತಿ ಸ್ನೇಹಾಲತಾ ಶೆಟ್ಟಿ ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಗ್ರಾಮ ಪಂಚಾಯತ್ ಸದಸ್ಯ ಜಯ ಪ್ರಸಾದ್ ಉಪಸ್ಥಿತರಿದ್ದರು.