ಪುತ್ತೂರು : ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ, ದೊಡ್ಡಬಳ್ಳಾಪುರ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜ್ ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಮನೆಗೆ ಭೇಟಿ ನೀಡಿದರು.
ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಯುಕ್ತ ಜಿಲ್ಲೆಗೆ ಭೇಟಿ ನೀಡಿದ ಯುವ ಮೋರ್ಚಾ ಅಧ್ಯಕ್ಷರನ್ನು ನರಿಮೊಗರು ಬಳಿ ಇರುವ ಅರುಣ್ ಪುತ್ತಿಲ ರವರ ಮನೆ ಬಳಿ ಸ್ವಾಗತಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪುತ್ತೂರು ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್, ನಗರ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಉಡುಪಿ ಯುವ ಮೋರ್ಚಾ ಅಧ್ಯಕ್ಷ ಯಕ್ಷಿತ್, ಮುಖಂಡರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಭರತ್ ರಾಜ್ ಕೃಷ್ಣಪುರ, ಕೃಷ್ಣ ನವ್ಯ, ವಿರೂಪಾಕ್ಷ ಭಟ್, ದಯರಾಜ್ ತೆಂಕಿಲ, ಚಿಂತನ್ ಚಿಕ್ಕಪುತ್ತೂರು, ರಜನೀಶ್ ಕೊಳ್ತಿಗೆ ಉಪಸ್ಥಿತರಿದ್ದರು.