ಪುತ್ತೂರು :ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆಯಲ್ಲಿ ಸಂಸ್ಥೆಯ ಮಾಲಕ ಮತ್ತು ಮಾಜಿ ಕೆಲಸಗಾರನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದ ಘಟನೆ ಇಂದು(ನ. 25)ನಡೆದಿದೆ.
ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ವಿಚಕ್ರ ವಾಹನಗಳ ಶೋ ರೂಮ್ ಒಂದರಲ್ಲಿ ಇಂತಹ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ..
ಕೆಲಸಗಾರನು 3 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ಈಗ ಸಂಸ್ಥೆಗೆ ಹೋಗಿ ಪಿಎಫ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ರೀತಿಯ ಘಟನೆ ನಡೆದಿದೆ ಎನ್ನಲಾಗಿದೆ.. “ತನ್ನ ಪಿಎಫ್ ಸಂಪೂರ್ಣಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಗಳು ಹಾಗೂ ಸಂಸ್ಥೆಯ ಮಾಲಕ ಮೈ ಮುಟ್ಟಿ ಹೊಡೆದಾಡಿದರು” – ಎಂದು ಹೇಳುವ ಮಾಜಿ ಕೆಲಸಗಾರ ಒಂದೆಡೆಯಾದರೆ, “ಶೋರೂಂನ ಹೆಚ್. ಆರ್. ಗೆ ಬಂದು ಬೇಕಾಬಿಟ್ಟಿ ಬೈಗುಳ ನೀಡಿದನು ಅಲ್ಲದೆ ಸಂಸ್ಥೆಯ ಗಾಜು ಪುಡಿ ಮಾಡಿ ಹಲ್ಲೆ ನಡೆಸಿದ್ದಾನೆ” – ಎನ್ನುವ ವಿಚಾರ ಇತ್ತ ಕಡೆಯಿಂದ ಈಗಾಗಲೇ ದಾಖಲಾಗಿದೆ..ಈ ಕಾರಣಕ್ಕೆ ಕೈಗೆ ಕೈ ಹಿಸುಕಿಕೊಂಡು ಇದೀಗ ಮಾರಕವಾಗಿ ಪರಿಣಾಮ ಬೀರಿದ್ದು, ಸಂಸ್ಥೆಯ ಮಾಲಕ ಮತ್ತು ಕೆಲಸಗಾರನ ಮಧ್ಯೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟು, ಹೊಡೆದಾಟವೂ ನಡೆದು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಸ್ಥೆಯ ಮಾಲಕ ಅಖಿಲೇಶ್ ಮತ್ತು ಮಾಜಿ ಕೆಲಸಗಾರ ರಂಜನ್ ಎಂಬುದಾಗಿ ಗುರುತಿಸಲಾಗಿದ್ದು, ಪ್ರಸ್ತುತ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ