ಪುತ್ತೂರು : ಎರಡು ವರ್ಷದ ಹಿಂದೆ ಪುತ್ತೂರಿನ ಬೀಡಿ ಬ್ರ್ಯಾಂಚ್ವೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿ ಕಳವು ಮಾಡಿದ ಪ್ರಕರಣದ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಪುತ್ತೂರು ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್ ಕುಂಞಿ ಬಂಧಿತ.
2022ರಲ್ಲಿ ಕೂರ್ನಡ್ಕದ ಬೀಡಿ ಬ್ರ್ಯಾಂಚ್ವೊಂದರಿಂದ ಸುಮಾರು 22 ಸಾವಿರ ರೂ. ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.