ಅಳಕೆಮಜಲು : ಶ್ರೀ ಶಾರಧಾಂಭ ಭಜನಾ ಮಂಡಳಿ ರಿ ಅಶೋಕ ನಗರ ಅಳಕೆಮಜಲು ಇದರ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮತ್ತು ನೂತನ ಸಮಿತಿಯನ್ನು ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಪೂಜಾರಿ ಮತ್ತು ಗೌರವ ಸಲಹೆಗಾರರಾದ ರಾಜಾರಾಮ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ನೇಮಿಸಲಾಯಿತು.
ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಕೃಷ್ಣಕಿಶೋರ್ ಭಟ್ ಪೆಲತ್ತಿಂಜ, ಉಪಾಧ್ಯಕ್ಷರಾಗಿ ಉದಯ್ ಕುಲಾಲ್ ಪುಂಡಿಕಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಗೌಡ ಪೆಲತ್ತಿಂಜ ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಉರಿಮಜಲು, ಕೋಶಾಧಿಕಾರಿಯಾಗಿ ಸತೀಶ್ ನಾಯ್ಕ್ ಪುಂಡಿಕಾಯಿರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ನಿಕಟ ಪೂರ್ವ ಪದಾಧಿಕಾರಿಗಳಾದ ತಿರುಮಲೇಶ್ವರ್ ನಾಯ್ಕ್ , ಸುಧೀರ್ ನಾಯ್ಕ್ ಕೆಮನಾಜೆ, ಬಾಸ್ಕರ್ ರೈ ಅಳಕೆಮಜಲು, ಹಾಗೂ ಸಮಿತಿಯ ಸದಸ್ಯರಾದ ಕೃಷ್ಣಪ್ಪ ಕೆಮನಾಜೆ, ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರದೀಪ್ ಶೆಟ್ಟಿ ಅಳಕೆಮಜಲು, ಸುಂದರ್ ಪೂಜಾರಿ ,ಯಾದವ ಉರಿಮಜಲು ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾದ ಗೀತಾ ನಾಯ್ಕ್ ಅಳಕೆಮಜಲು, ಪಧಾಧಿಕಾರಿಗಳಾದ ಭವ್ಯ ಪೆಲತ್ತಿಂಜ , ರೂಪಾ ಕುಲಾಲ್ ಪುಂಡಿಕಾಯಿ, ಸುಗಂಧಿನಿ ಪೆಲತ್ತಿಂಜ, ಆಶಾ ನಾಯ್ಕ್ ಅಳಕೆಮಜಲು ಹಾಗೂ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.





























