ವಿಟ್ಲ : ಶ್ರೀಕೃಷ್ಣ ಯುವಕ ಸಂಘ ಹಾಗೂ ಬಿಜೆಪಿ ಅಡ್ಯನಡ್ಕ ಇದರ ವತಿಯಿಂದ ಮಾಣಿಯಡ್ಕದಿಂದ ಸಾಯ ದ ವರೆಗೆ ರಸ್ತೆಗೆ ಮಣ್ಣು ಹಾಕುವ ಕಾರ್ಯ ಹಾಗೂ ರಸ್ತೆ ದುರಸ್ತಿಯನ್ನು ಶ್ರಮದಾನ ಕಾರ್ಯದ ಮೂಲಕ ನೆರವೇರಿಸಿದರು.
ಈ ಶ್ರಮದಾನ ಕಾರ್ಯದಲ್ಲಿ 30 ಕ್ಕಿಂತಲೂ ತರುಣರು ಹಾಗೂ ಹಿರಿಯರು ಪಾಲ್ಗೊಂಡಿದ್ದು, ಈ ಶ್ರಮದಾನವು ಜೂ.13 ರ ಆದಿತ್ಯವಾರದಿಂದ ಪ್ರತಿ ಆದಿತ್ಯವಾರವೂ ನಡೆಯಲಿದೆ ಎಂದು ಹೇಳಿದ್ದಾರೆ.
ಸಾಯ ವಾರ್ಡ್ ಬಿಜೆಪಿ ಅಧ್ಯಕ್ಷರಾದ ನಾರಾಯಣ ಭಟ್ ಕೂಟೇಲು, ವಾರ್ಡ್ ಸದಸ್ಯ ಮಹೇಶ್ ಭಟ್ಟ್ ಸಾಯ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.