ದೇಶದ ಅಮಾಯಕ ಜನರಿಗೆ ಸ್ವರ್ಗವನ್ನೇ ತಂದು ಕೊಡುತ್ತೇನೆ ಎಂದು ಸುಳ್ಳು ಪೊಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿಯ ಬಿಜೆಪಿ ಸರಕಾರ ಕಳೆದ ಏಳು ವರ್ಷಗಳ ತನ್ನ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ವಿಪರೀತವಾಗಿ ಏರಿಸಿ ಜನಸಾಮಾನ್ಯರ ಹಾಗೂ ಬಡವರ ಬದುಕಿನಲ್ಲಿ ಚೆಲ್ಲಾಟವಾಡಿ ಜನತೆಗೆ ದ್ರೋಹ ಎಸಗಿರುತ್ತಾರೆ, ಕೊರೊನಾ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ದೇಶದ ಜನರು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಸತತವಾಗಿ ಪೆಟ್ರೋಲ್, ಡಿಸೇಲ್,ಮತ್ತು ಅಡುಗೆ ಅನಿಲದ ಬೆಲೆ ಏರಿಸವುದರ ಮೂಲಕ ಬಡವರ ಹಾಗೂ ಜನ ಸಾಮಾನ್ಯರ ಹೊಟ್ಟೆಗೆ ಹೊಡೆಯುತ್ತಿದೆ ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಯವರು ತಿಳಿಸಿರುತ್ತಾರೆ.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಸೂಚನೆಯಂತೆ ಆರ್ಯಾಪು ವಲಯ ಕಾಂಗ್ರೆಸ್ ವತಿಯಿಂದ ಮುಕ್ರಂಪಾಡಿ ಜೆ ಕೆ ಪೆಟ್ರೋಲ್ ಬಂಕ್ ಎದುರು ತೈಲ ಬೆಲೆ ಏರಿಕೆ ಯ ವಿರುದ್ದ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ ಕಾಂಗ್ರೆಸ್ ಸರಕಾರ ಪೆಟ್ರೋಲ್, ಡಿಸೇಲ್ ದರ ಕೇವಲ 10 ಪೈಸೆಯಷ್ಟು ಏರಿಸಿದಾಗ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು ಈಗ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 100 ರೂಪಾಯಿ ಆದಾಗ ಎಲ್ಲಿ ಅಡಗಿ ಕೂತಿದ್ದಾರೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ,ಮಾಜಿ ಜಿ ಪ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ. ಉದ್ಯಮಿ ಶಿವರಾಮ ಆಳ್ವ, ನಗರ ಸಭಾ ಸದಸ್ಯರಾದ ಶ್ರೀಮತಿ ಶೈಲಾ ಪೈ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸನತ್ ರೈ, ಆರ್ಯಾಪು ಪಂಚಾಯತ್ ಸದಸ್ಯರಾದ ನೇಮಾಕ್ಷ ಸುವರ್ಣ, ಸಲಾಂ ಸಂಪ್ಯ, ಆದಂ ಕಲ್ಲರ್ಪೆ, ಎ ಪಿ ಜೆ ರಝಕ್, ರವಿ ಆಚಾರಿ ಆರ್ಯಾಪು, ರಫೀಕ್ ಸಂಪ್ಯ, ನಾಸಿರ್ ಇಡಬೆಟ್ಟು, ಮೋಹನ ಗೌಡ ಇಡಬೆಟ್ಟು, ಪ್ರಕಾಶ ಮಲಾರ್, ಇಬ್ರಾಹಿಂ ಅಮ್ಮುಂಜೆ, ವೇಣುಗೋಪಾಲ ಮೊಟ್ಟೆತಡ್ಕ, ವಿಶ್ವನಾಥ್ ಟೈಲರ್ ಮೊಟ್ಟೆತಡ್ಕ, ಸುರೇಶ್ ಪೂಜಾರಿ ಮೊಟ್ಟೆತಡ್ಕ, ಅಬ್ದುಲ್ಲಕುಂಞ ಮೊಟ್ಟೆತಡ್ಕ, ರಫೀಕ್ ಮೊಟ್ಟೆತ್ತಡ್ಕ, ಸುರೇಂದ್ರ ಮೊಟ್ಟೆತ್ತಡ್ಕ, ಮೋಹನ್ ಮಾರಾರ್ ಮೊಟ್ಟೆತಡ್ಕ, ಶ್ರೀಮತಿ ಆಶಾಲತಾ ಮೊಟ್ಟೆತಡ್ಕ, ಶ್ರೀಮತಿ ಗಿರಿಜಾ ಮೊಟ್ಟೆತಡ್ಕ, ಆರ್ಯಾಪು ಸಹಕಾರಿ ಸಂಘದ ನಿರ್ದೇಶಕ ಹಾರಿಸ್ ಸಂಟ್ಯಾರ್, ಕಾಂಗ್ರೆಸ್ ಮುಖಂಡ ರಝಕ್ ಸಂಟ್ಯಾರ್ ಉಪಸ್ಥಿತರಿದ್ದರು.
ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ ಸಂಪ್ಯ ಸ್ವಾಗತಿಸಿ, ವಂದಿಸಿದರು.