ಪುತ್ತೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇದರ ವತಿಯಿಂದ ಕೊಡ ಮಾಡುವ 2024-25 ನೇ ಸಾಲಿನ ‘ಸಂಗೊಳ್ಳಿ ರಾಯಣ್ಣ’ ರಾಜ್ಯ ಯುವ ಪ್ರಶಸ್ತಿಗೆ ಮಜ್ಞಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟಕರಾದ ರಾಜೇಶ್ ಕೆ.ಮಯೂರ ಆಯ್ಕೆಯಾಗಿದ್ದಾರೆ.

ಜ.27 ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ತಾಲೂಕು ಯುವ ಪ್ರಶಸ್ತಿ , ಜಿಲ್ಲಾ ಯುವ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ, ಗೌರವಾರ್ಪಣೆ ಪುರಸ್ಕೃತರಾಗಿರುವ ರಾಜೇಶ್ ಕೆ.ಮಯೂರರವರು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಮಕ್ಕಳ ಕುಣಿತ ಭಜನಾ ತಂಡದ ಸಂಘಟಕರಾಗಿ, ಮಚ್ಚಾರಡ್ಕ ಶ್ರೀ ವಿಷ್ಣು ಸಾಂಸ್ಕೃತಿಕ ಸೇವಾ ಸಮಿತಿಯ ಅಧ್ಯಕ್ಷರಾಗಿ, ಅರಿಯಡ್ಕ ಗ್ರಾಮದ ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಆಗಿ, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಮತ್ತು ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ, ಪುತ್ತೂರು ಭಾರತ್ ಕಟ್ಟಡ ಕಾರ್ಮಿಕ ಸಂಘದ ಸದಸ್ಯರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಪತ್ನಿ ಜಯಲಕ್ಷ್ಮೀ, ಪುತ್ರಿ ಆದ್ಯ ಆರ್. ಜೆ, ಪುತ್ರ ಆರ್ಯನ್ ಆರ್.ಜೆ ರವರೊಂದಿಗೆ ಅರಿಯಡ್ಕ ಗ್ರಾಮದ ಗೋಳ್ತಿಲದಲ್ಲಿ ಇವರು ವಾಸವಿದ್ದಾರೆ.