ಉಡುಪಿ: ವಿದ್ಯುತ್ ಶಾಕ್‌ನಿಂದ ಯುವಕನೋರ್ವ ಸಾವಿಗೀಡಾದ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ. ಮಲ್ಪೆ ಕೊಡವೂರು ನಿವಾಸಿ ಮೋಕ್ಷಿತ್ ಕರ್ಕೇರ (25) ಮೃತ ದುರ್ದೈವಿ.
ಮೋಕ್ಷಿತ್ ಕರ್ಕೇರ, ಉದ್ಯಾವರದ ಕನಕೋಡ ಎಂಬಲ್ಲಿ ತನ್ನ ಚಿಕ್ಕಪ್ಪ ಶಂಕರ ಎಂಬವರ ಮನೆಯಲ್ಲಿದ್ದರು. ಈ ವೇಳೆ ಜೋರಾಗಿ ಗಾಳಿ ಬೀಸಿದ ಪರಿಣಾಮ ವಿದ್ಯುತ್ ಕೈ ಕೊಟ್ಟಿತ್ತು. ವಿದ್ಯುತ್ ಸರಿಪಡಿಸಲು ಮೇನ್ ಸ್ವಿಚ್ ಬೋರ್ಡ್ ಪರಿಶೀಲನೆ ನಡೆಸುತ್ತಿದ್ದಾಗ, ಕರೆಂಟ್ ಶಾಕ್ ತಗುಲಿದೆ.
ಗಂಭೀರವಾಗಿ ಗಾಯಗೊಂಡ ಮೋಕ್ಷಿತ್‌ರನ್ನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದರು. ಸಮಯ ಸಿಕ್ಕಾಗಲೆಲ್ಲಾ ಅವನು ತನ್ನ ತಾಯಿಯೊಂದಿಗೆ ಮೀನು ಮಾರಾಟದ ವೃತ್ತಿಗೆ ಸಹಾಯ ಮಾಡುತ್ತಿದ್ದರು. ಮನೋಜ್ ಕರ್ಕೇರಾ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯರಾದ ಮೋಕ್ಷಿತ್ ಕುಟುಂಬವನ್ನು ಪೋಷಿಸುತ್ತಿದ್ದರು.