ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಮಾರ್ಗದರ್ಶನದಂತೆ, ಬಿಜೆಪಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ ವತಿಯಿಂದ ಪುತ್ತೂರು ತಾಲೂಕಿನ ಕೋವೀಡ್ ಕೇರ್ ಸೆಂಟರ್ ಗೆ 1,000 ಮಾಸ್ಕ್ ಗಳನ್ನು ಮಾನ್ಯ ಪುತ್ತೂರು ತಹಶಿಲ್ದಾರರ ಮುಖಾಂತರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ,ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ,ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ಬಿಜೆಪಿ ಬೆಂಗಳೂರು ಉತ್ತರ ವೃತ್ತಿಪರ ಪ್ರಕೋಷ್ಟದ ಜಿಲ್ಲಾ ಸಹಸಂಚಾಲಕರಾದ ಹೇಮಂತ್ ರೈ ಉಪಸ್ಥಿತರಿದ್ದರು.