ಪುತ್ತೂರು : ಜಾತ್ರಾ ಸಂದರ್ಭ ಜಾಯಿಂಟ್ ವೀಲ್ ಕೆಲಸಕ್ಕೆ ಬಂದು ಲಾಕ್ ಡೌನ್ ನಿಂದಾಗಿ ಇಲ್ಲೇ ಬಾಕಿ ಆಗಿರುವ ಕುಟುಂಬಗಳಿಗೆ ಹಿಂದು ಜಾಗರಣ ವೇದಿಕೆ ವತಿಯಿಂದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಎಸ್ ಆರ್ ಅಸೋಸಿಯೇಷನ್ ನ ಮಾಲಕ ಶಿವಪ್ರಸಾದ್ ಇಜ್ಜಾವರ ರವರ ಸಹಕಾರದಿಂದ ಹಿಂದು ಜಾಗರಣ ವೇದಿಕೆ ವತಿಯಿಂದ ದೇವಳದ ಗದ್ದೆಯಲ್ಲಿ ವಾಸವಿರುವ ಈ ಕುಟುಂಬ ಗಳಿಗೆ ಸಹಕಾರ ನೀಡಲಾಯಿತು.
ಈ ಸಂದರ್ಬದಲ್ಲಿ ಎಸ್ ಆರ್ ಅಸೋಸಿಯೇಷನ್ ನ ಮಾಲಕ ಶಿವಪ್ರಸಾದ್ ಇಜ್ಜಾವರ, ಮಾಜಿ ಪುರಸಭಾ ಸದಸ್ಯ ರಾಜೇಶ್ ಬನ್ನೂರು, ಹಿಂದು ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಚಿನ್ಮಯ್ ಈಶ್ವರಮಂಗಲ,ರಾಜೇಶ್ ಪಂಚೊಡಿ,ಪುಷ್ಪರಾಜ್ ದರ್ಬೆ,ರಾಜ ಕೋರ್ಟ್ ರೋಡ್,ಸ್ವಸ್ತಿಕ್ ಮೆಗಿನಮನೆ,ಮನೋಜ್ ಪುತ್ತೂರು,ಪುಷ್ಪರಾಜ್ ಸವಣೂರು,ಶ್ರೀಕಾಂತ್ ಬೆಳ್ಳಿಪ್ಪಾಡಿ,ರಜನೀಶ್ ಪರ್ಲಂಪಾಡಿ ಮತ್ತಿತರರು ಉಪಸ್ಥಿತರಿದ್ದರು.