ಪುತ್ತೂರು :ಕೋವಿಡ್ ಕಾರಣ ಚೆಕ್ ಪೋಸ್ಟ್ ಪೋಲೀಸ್ ಸಿಬ್ಬಂದಿಗಳ ಹಸಿವು ನೀಗಿಸಿದ ದಾನಿಗಳಿಗೆ ಸಂಚಾರಿ ಆರಕ್ಷಕ ಸಿಬ್ಬಂದಿಗಳಿಂದ ಜೂ. 18 ರಂದು ಸನ್ಮಾನ ಕಾರ್ಯಕ್ರಮ ನಡೆಯಿತು.
ಲಾಕ್ ಡೌನ್ ಸಂದರ್ಭದಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ನಿರಂತರ ಸೇವೆಯಲ್ಲಿ ತೊಡಗಿದ್ದ ಆರಕ್ಷಕ ಸಿಬ್ಬಂದಿಗಳಿಗೆ ಜತೆಗೆ ಹಲವರಿಗೆ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಹಲವರು ಹಸಿವು ನೀಗಿಸುವ ಕಾರ್ಯ ಮಾಡಿದ್ದರು. ಮುಳಿಯ ಜ್ಯುವೆಲ್ಲರ್ಸ್ನ ಕಡೆಯಿಂದ ಕೇಶವ ಪ್ರಸಾದ್ ಮುಳಿಯ,ಕೃಷ್ಣ ನಾರಾಯಣ ಮುಳಿಯ,ಶ್ಯಾಮೂರ್ತಿ, ಸುಬ್ರಾಯ ಶರ್ಮ, ಶಂಕರ್ ನಾರಾಯಣ್, ದಿವಾಕರ್, ರಮೇಶ್,ಶಂಕರ ನಾರಾಯಣ ಎನ್.ಕೆ, ಶೇಖರ್, ಪ್ರಶಾಂತ್, ಮನೋಹರ್, ಧನೇಶ್, ಹೋಟೆಲ್ ದಿನೇಶ್ ಭವನ ದ ಗಿರಿಧರ್ ಶೆಣೈ,ನಿತಿನ್, ಸಚಿನ್, ಮೆಡಿಕಲ್ ಅಸೋಸಿಯೇಷನ್ ನ ಮುತ್ತು ರಾಜ್, ಪುರುಷೋತ್ತಮ, ಪ್ರಶಾಂತ್, ಆರದಿರಲಿ ಬದುಕುವ ಆರಾಧನಾ ತಂಡದ ಪದ್ಮಶ್ರೀ ಭಟ್, ನವೀನ್ ನಗರ, ಸಾಲಿ ಮಂಜಲ್ಪಡ್ಪು , ಪೈ ಕೇಟರಾರ್ಸ್ ನ ದಿನೇಶ್ ಪೈ ಹಾಗೂ ದೀಕ್ಷಾ ಪೈ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಯ ಗಿರೀಶ್ ಕುಮಾರ್ ಹಾಗೂ ದೀಪಕ್ ಕುಮಾರ್ ಸೇರಿದಂತೆ ಹಲವರ ನಿಸ್ವಾರ್ಥ ಸೇವೆಯನ್ನು ಗುರುತಿಸಲಾಯಿತು.
ದಿನನಿತ್ಯ ಉಪಾಹಾರ, ಚಹಾ, ಮಧ್ಯಾಹ್ನದ ಊಟ, ಕಷಾಯವನ್ನು ನೀಡಿ ಸಹಕರಿಸುತ್ತಿದ್ದ ಎಲ್ಲರಿಗೂ ಸಂಚಾರಿ ಠಾಣಾ ಪೋಲೀಸರು ಜತೆಗೂಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.