ವಿಟ್ಲ : ಮಹಿಳೆಯೊಬ್ಬಳ ಮನೆಗೆ ಅಕ್ರಮ ಪ್ರವೇಶ ಮಾಡಿ ಆಕೆಯ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಕನ್ಯಾನ ಗ್ರಾ ಪಂ ಅಧ್ಯಕ್ಷನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ಯಾನ ಗ್ರಾಮದ ಪಿಲಿಚಂಡಿ ಗುಡ್ಡೆ ಎಂಬಲ್ಲಿನ ನಿವಾಸಿಯಾಗಿರುವ ಮಹಿಳೆಯ ಮನೆಗೆ ಕುಡಿಯುವ ನೀರಿನ ಸಂಪರ್ಕವಿದೆ. ಈಕೆ ತಿಂಗಳ ಬಿಲ್ ಕಟ್ಟಿದ್ದರೂ ಸಂಪರ್ಕ ಕಡಿತಗೊಳಿಸಲು ಅಧ್ಯಕ್ಷರು ಹೇಳಿದ್ದಾರೆಂದು ಹೇಳುತ್ತಾ ಪಿಡಿಒ ಮತ್ತು ಸಿಬ್ಬಂದಿ ಬಂದಾಗ ಮಹಿಳೆ ಬಿಲ್ ಪಾವತಿ ಮಾಡಿದ್ದೇನೆಂದು ತಿಳಿಸಿದ್ದಾರೆ.
ಅಷ್ಟಕ್ಕೆ ಪಿಡಿಒ ಮತ್ತು ಸಿಬ್ಬಂದಿ ಹಿಂತಿರುಗಿ ಸುಮ್ಮನಾಗಿದ್ದರು. ೧೬ರಂದು ಮಹಿಳೆಯ ಮನೆಗೆ ಯಾರೂ ಇಲ್ಲದ ಸಂದರ್ಭ ಗ್ರಾ ಪಂ ಅಧ್ಯಕ್ಷ ಅಂದುಮ್ಮ ಯಾನೆ ಅಬ್ದುಲ್ ರಹಿಮಾನ್ ಒಬ್ಬಂಟಿಯಾಗಿ ಬಂದು ಅಕ್ರಮ ಪ್ರವೇಶ ಮಾಡಿದ್ದಲ್ಲದೇ ಆಕೆಯ ಕೈಹಿಡಿದು ತಾನು ಹೇಳಿದಂತೆ ಕೇಳಬೇಕೆಂದು ಒತ್ತಾಯಿಸಿದ ಬಗ್ಗೆ ಸಂತ್ರಸ್ತೆ ತಿಳಿಸಿದ್ದಾರೆ. ಮಹಿಳೆ ಪ್ರತಿಭಟಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಬಟ್ಟೆಯನ್ನು ಎಳೆದು ಹರಿಯಲು ಮುಂದಾಗುತ್ತಿದ್ದAತೆ ಮಹಿಳೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದು ಆ ಸಂದರ್ಭ ತಾನು ಬಂದಿರುವ ವಿಚಾರ ಯಾರಿಗಾದರೂ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕಾಲ್ಕಿತ್ತನೆಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ಆರೋಪಿ ವಿರುದ್ಧ ಅಕ್ರಮ ಪ್ರವೇಶ, ಮಹಿಳೆ ಮೇಲೆ ಹಲ್ಲೆ, ಅತ್ಯಾಚಾರಕ್ಕೆ ಯತ್ನ ಮತ್ತು ಜೀವಬೆದರಿಕೆ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಬಂಟ್ವಾಳ ಸರ್ಕಲ್ ನಂಜುAಡೇ ಗೌಡ ಕರ್ತವ್ಯದಲ್ಲಿದ್ದ ಸಂದರ್ಭ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಹಲವು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು ಆ ಬಳಿಕ ಮತ್ತೆರಡು ದೂರುಗಳೂ ವಿಟ್ಲ ಠಾಣೆಯಲಿ ಪ್ರಕರಣ ದಾಖಲಾಗಿದೆ