ಪುತ್ತೂರು : ಪುತ್ತೂರಿನ ಮನೆಯೊಂದರಲ್ಲಿ ನಾಗರ ಹಾವೊಂದು ಬಂದು ಹಕ್ಕಿ ಗೂಡಿನಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಜೂ.17 ರಂದು ನಡೆದಿದೆ.
ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿರುವ ದಯಾನಂದ ರವರ ಮನೆಯ ಹಕ್ಕಿ ಗೂಡಿಗೆ ಹಾವೊಂದು ನುಗ್ಗಿ ಅಲ್ಲಿದ್ದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಈ ಹಾವನ್ನು ಪುತ್ತೂರಿನಲ್ಲಿ ಹಾವುಗಳ ರಕ್ಷಕ, ಉರಗ ಪ್ರೇಮಿ ಎಂದೇ ಖ್ಯಾತಿಯನ್ನು ಪಡೆದಿರುವ ತೇಜಸ್ ಅವರ ಮೂಲಕ ಸಂರಕ್ಷಿಸಿ ಯಶಸ್ವಿಯಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.