ಪುತ್ತೂರು: ಜೆಸಿಐ ಪುತ್ತೂರು ವತಿಯಿಂದ ‘ಸೆಲ್ಯೂಟ್ ದ ಸೈಲೆಂಟ್ ವರ್ಕರ್’ ಎನ್ನುವ ವಿಭಿನ್ನ ರೀತಿಯ ಕಾರ್ಯಕ್ರಮವು ಪುತ್ತೂರು ಕ್ಲಬ್ ನಲ್ಲಿ ಜೆಸಿ ಸದಸ್ಯರು ಉದ್ಯಮಿ ಜಯಕುಮಾರ್ ನಾಯಕ್ ರವರ ಆತಿಥ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಭಾರತ ಮಾತೆಯ ಹೆಮ್ಮೆಯ ಪುತ್ರರಾಗಿ ದೇಶ ಕಾಯುವ ಯೋಧ ಗಣೇಶ್ ಅವರ ಬದುಕಿನ ಸಾಧನೆಯಲ್ಲಿ ಸದಾಬೆನ್ನೆಲುಬಾಗಿ ನಿಂತು ಹುರಿದುಂಬಿಸಿದ ಧರ್ಮಪತ್ನಿ ಶ್ರೀಮತಿ ಶಾಲಿನಿ ಬಿ ಹಾಗೂ ವೀರಯೋಧ ಲೋಕೇಶ್ ರವರ ಧರ್ಮಪತ್ನಿ ಶ್ರೀಮತಿ ರಶ್ಮಿ ಜಿ. ಮತ್ತು ಪುರಸಭೆಯಲ್ಲಿ ಕೆಲಸಕ್ಕೆ ಸೇರಿಕೊಂಡು ಆ ಮೂಲಕ ಹಲವಾರು ಹುದ್ದೆಗಳಲ್ಲಿ ನಿಷ್ಠೆಯಿಂದ ಸೇವೆಗೈದು ಸದಾ ಸಮಾಜಸೇವೆಯ ತುಡಿತ ಹೊಂದಿರುವ, ಜನ ಮೆಚ್ಚುಗೆ ಪಡೆದಿರುವ ಐತಪ್ಪ ರವರಿಗೆ ಜೆಸಿಐ ಪುತ್ತೂರು ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಶರತ್ ಕುಮಾರ್, ಝೆಡ್ ವಿ ಪಿ ರೀಜಿಯನ್ ಎಫ್ ಮತ್ತು ಉದ್ಯಮಿ ಜಯಕುಮಾರ್ ನಾಯಕ್, ಜೆಸಿಐ ಅಧ್ಯಕ್ಷೆ ಜೆಸಿ. ಸ್ವಾತಿ ಜಗನ್ನಾಥ್ ರೈ, ಕಾರ್ಯದರ್ಶಿ ತಿಲಕ್ ರಾಜ್, ಜೆಸಿಆರ್ ಟಿ ಶಿಲ್ಪಾ ಪುರುಷೋತ್ತಮ್ ಶೆಟ್ಟಿ ಮತ್ತು ಜೆಜೆಸಿ ಸಮನ್ವಿ ರೈ ಮದಕರವರು ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮವನ್ನು ಜೆಸಿ ಶರತ್ ಕುಮಾರ್ ರೈ, ಜೆಸಿ ಋತ್ವಿಕ್, ಜೆಸಿ ದೀಕ್ಷಾ ಪಾರ್ವತಿ, ವಂದನಾ ಶರತ್, ಜೆಸಿ ಕುಸುಮ್, ಜೆಸಿ ಜಗನ್ನಾಥ್ ರೈ ಮತ್ತು ಎಲ್ಲಾ ಪೂರ್ವಾಧ್ಯಕ್ಷರು ಮತ್ತು ಜೆಸಿ ಸದಸ್ಯರು ನೆರವೇರಿಸಿದರು.