ಬೆಂಗಳೂರು: ಮಾಸ್ಕ್ ಎಲ್ಲರೂ ಕಡ್ಡಾಯವಾಗಿ ಧರಿಸಬೇಕು. ಜನರು ಏನೂ ಆಗಲ್ಲ ಅಂತಾ ಉದಾಸೀನ ತೋರ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು. ಅವರ ಡೆತ್ ಆಡಿಟ್ ನಡೀತಿದೆ. 60 ವರ್ಷ ಮೇಲ್ಪಟ್ಟವರು ಅತೀ ಜರೂರಾಗಿ ಮೂರನೇ ಡೋಸ್ ತೆಗೆದುಕೊಳ್ಳಬೇಕು. ಮಾಸ್ಕ್ ಹಾಕದಿದ್ದರೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು.
ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಕೊವಿಡ್ ಸೋಂಕು ಏರಿಕೆ ಆದ್ರೆ ಕ್ರಮ ಕೈಗೊಳ್ಳುತ್ತೇವೆ. 15 ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡ್ತೇವೆ. ಸಭೆ-ಸಮಾರಂಭ ನಿರ್ಬಂಧಿಸಬೇಕು ಎಂದು ತಜ್ಞರು ಹೇಳಿಲ್ಲ. ಆದರೆ ಜನರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಹಬ್ಬಕ್ಕೆ ಯಾವುದೇ ಪ್ರತ್ಯೇಕ ರೂಲ್ಸ್ ಜಾರಿ ಇಲ್ಲ. ವ್ಯಾಕ್ಸಿನ್ ಹಾಕಿಸಿದ್ರೆ ಸಾವು ಬರಲ್ಲ, ಸೋಂಕು ತಡೆಯಬಹುದು. ಸಿಎಂ ಬೊಮ್ಮಾಯಿ ಮೂರು ಡೋಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರಿಗೆ ಏನೂ ಸಮಸ್ಯೆ ಆಗಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.
ಮಂಕಿಪಾಕ್ಸ್ ಬಗ್ಗೆಯೂ ಚರ್ಚೆ ಮಾಡಿದ್ದೀವಿ. ದೇಶದಲ್ಲಿ ಒಂಬತ್ತು ಪ್ರಕರಣ ದಾಖಲಾಗಿವೆ. ಕೇರಳದಲ್ಲಿ ಐದು, ದೆಹಲಿಯಲ್ಲಿ ನಾಲ್ಕು ಕೇಸ್ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಮಂಕಿಪಾಕ್ಸ್ ಕೇಸ್ ಪತ್ತೆ ಆಗಿಲ್ಲ. ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಮಲೇರಿಯ, ಡೆಂಘೀ, ಹೆಚ್ 1 ಎನ್ 1 ಬಗ್ಗೆಯೂ ಅಧ್ಯಯನ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಲೇರಿಯಾ 114 ಪಕ್ರರಣ ಇದೆ. ಡೆಂಘೀ 4415 ಮಂದಿಗೆ ಬಂದಿದ್ದು, 36 ಸಾವಿರ ಟೆಸ್ಟಿಂಗ್ ಮಾಡಿದ್ದೇವೆ. ಚಿಕೂನ್ ಗುನ್ಯಾ 978, ಹೆಚ್ 1ಎನ್ 1 303 ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.


























