ಪುತ್ತೂರು : ವೀಕೆಂಡ್ ಕರ್ಪ್ಯೂ ದಿನವಾದ ಶನಿವಾರ ಬೆಳಗ್ಗೆ 6ರಿಂದ 10ರವೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶವಿತ್ತಾದರೂ, ಪುತ್ತೂರು ಪೇಟೆಯಲ್ಲಿ ಜನಸಂಖ್ಯೆ ಭಾರೀ ವಿರಳವಾಗಿತ್ತು.10 ಗಂಟೆಯ ಹೊತ್ತಿಗೆ ಪುತ್ತೂರು ಪೇಟೆ ಸಂಪೂರ್ಣ ಬಂದ್ ಆಗಿದ್ದು, ಅಲ್ಲಲ್ಲಿ ಪೊಲೀಸರನ್ನು ನೇಮಿಸಲಾಗಿದೆ.
ರಸ್ತೆಗಳಲ್ಲಿ ವಾಹನ ಸಂಚಾರ ವಿರಳಗೊಂಡು, ರಸ್ತೆಗಳು ಬಿಕೋ ಅನ್ನುತ್ತಿದ್ದವು. ವೀಕೆಂಡ್ ಕರ್ಪ್ಯೂ ಬಗ್ಗೆ ತಿಳಿದಿದ್ದ ಹೆಚ್ಚಿನ ಮಂದಿ ಶುಕ್ರವಾರವೇ ಅಗತ್ಯ ಸಾಮಗ್ರಿಗಳ ಖರೀದಿ ಮುಗಿಸಿದ್ದು, ಆದ್ದರಿಂದ ಹೆಚ್ಚಿನವರು ಶನಿವಾರ ಮನೆಯಿಂದ ಪೇಟೆಯತ್ತ ಮುಖ ಮಾಡಲಿಲ್ಲ. ಬಸ್ ನಿಲ್ದಾಣಕ್ಕೆ ಅಪರೂಪಕ್ಕೊಂದು ಎಂಬಂತೆ ಬಸ್‌ಗಳು ಬರುತ್ತಿದ್ದರೂ, ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿಯಾಗಿತ್ತು. ಕೆಲ ಅಂಗಡಿ ಮುಂಗಟ್ಟುಗಳು ಶುಕ್ರವಾರದಿಂದಲೇ ಬಂದ್ ಆಗಿದ್ದವು.