ಕೊರೋನ ವೈರಸ್ ಹರಡುವಿಕೆ ಕಡಿಮೆ ಮಾಡಲು ಲಾಕ್ಡೌನ್ ಮಾಡೋದು ಅಂತಿಮವಲ್ಲ. ಈಗ ಇರುವ ಲಾಕ್ಡೌನ್ ವ್ಯವಸ್ಥೆಯು ದೇಶದ ಮತ್ತು ರಾಜ್ಯ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಒಂದೇ ರೀತಿಯ ವ್ಯವಸ್ಥೆಯನ್ನು ತರುವ ಅವಶ್ಯಕತೆಯಿಲ್ಲ. ಯಾಕೆಂದರೆ ಆಯಾಯ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರುಗಳಿದ್ದಾರೆ, ಶಾಸಕರುಗಳಿದ್ದಾರೆ , ಜಿಲ್ಲಾಧಿಕಾರಿಗಳಿದ್ದಾರೆ. ಆಯಾಯ ಜಿಲ್ಲೆಗಳ ಮತ್ತು ಅದಕ್ಕೆ ಸಂಬಂಧಪಟ್ಟ ತಾಲೂಕುಗಳ ಶಾಸಕರುಗಳು ಉಸ್ತುವಾರಿ ಸಚಿವರು ಆರೋಗ್ಯ ಇಲಾಖೆಯವರು ಸೇರಿ ಮೀಟಿಂಗ್ ಮಾಡಿ ಅಲ್ಲಿಗೆ ಸಂಬಂಧಪಟ್ಟಂತ ಕಾನೂನುಗಳನ್ನು ಜಾರಿಗೆ ತರಬೇಕು.
ಉದಾಹರಣೆಗೆ ಕೆಲವು ಸಮಯಗಳ ಮೊದಲೇ ನಿಗದಿಯಾದ ಕಾರ್ಯಕ್ರಮಕ್ಕೆ, ಧಾರ್ಮಿಕ ಕಾರ್ಯಕ್ರಮಕ್ಕೆ, ಆ ಕಾರ್ಯಕ್ರಮವನ್ನು ಗಮನಿಸಿಕೊಂಡು ಅವಕಾಶ ಕೊಡಬೇಕಿತ್ತು ,ಉದಾಹರಣೆಗೆ ಕೋಡಿಂಬಾಡಿ ಮಠಂತಬೆಟ್ಟು ಬ್ರಹ್ಮಕಲಶೋತ್ಸವವು ಕಳೆದ 6ತಿಂಗಳಿನಿಂದ ಮೊದಲೇ ನಿಗದಿಯಾಗಿತ್ತು ಅದಕ್ಕೋಸ್ಕರ ಸುಮಾರು ಐವತ್ತು ಲಕ್ಷಕ್ಕಿಂತಲೂ ಹೆಚ್ಚು ಖರ್ಚುಗಳನ್ನು ಮಾಡಲಾಗಿತ್ತು ಈ ಹೊರೆಯನ್ನು ಸರಕಾರ ಭರಿಸುತ್ತದಾ.ಕೋವಿಡ್ ನಿಯಮಗಳನ್ನು ಅನುಸರಿಸಿಕೊಂಡು ಅಲ್ಲಿಗೆ ಸಂಬಂಧಪಟ್ಟ ಕೆಲವೊಂದು ನಿಯಮಗಳನ್ನು ಮಾಡಿಕೊಂಡು ಕೇವಲ ಆ ಗ್ರಾಮಕ್ಕೆ ಸೀಮಿತವಾಗಿ ಅವಕಾಶ ಕೊಡುತ್ತಿದ್ದರೂ ಆ ದೇವರ ಬ್ರಹ್ಮಕಲಶ ಕಾರ್ಯಕ್ರಮ ನಡೆಯುತ್ತಿತ್ತು.
✒️✒️ ಜಯಪ್ರಕಾಶ್ ಬದಿನಾರುಸದಸ್ಯರು ಗ್ರಾಮ ಪಂಚಾಯತ್ ಕೋಡಿಂಬಾಡಿ