ಬೆಳ್ತಂಗಡಿ : ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಮಂಗಳೂರು ವತಿಯಿಂದ ಬೆಳ್ತಂಗಡಿ ತಾಲೂಕು ಪಟ್ರಮೆಯಲ್ಲಿ ನಡೆದ ಮರಾಟಿ ನಾಯ್ಕರಾದ ಪದ್ಮನಾಭ ನಾಯ್ಕ ಮತ್ತು ಕುಸುಮ ಇವರ ಮೇಲೆ ಇವರ ಜಾಗಕ್ಕೆ ಅತಿಕ್ರಮಣ ಪ್ರವೇಶ ಗೈದು ಜಾತಿ ನಿಂದನೆ ಮಾಡಿ ದೈಹಿಕ ಹಲ್ಲೆ ನಡೆಸಿರುವ ವಿಷಯದ ಬಗ್ಗೆ ಇಂದು ದಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರಾದ ಆಶೋಕ್ ನಾಯ್ಕ ನೇತೃತ್ವದಲ್ಲಿ ಸದಸ್ಯರಾದ ಆನಂದ್ ನಾಯ್ಕ , ವಿನಯ ನಾಯ್ಕ ಸಂಪ್ಯ, ರವಿಪ್ರಸಾದ್ ಪೆರುವಾಯಿ,ಪ್ರಸನ್ನ ಕೊಕ್ಕಡ ಇವರನ್ನೊಳಗೊಂಡ ತಂಡ ಬೆಳಗ್ಗೆ ಪಟ್ರಮೆಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.
ಸರಕಾರಿ ಜಾಗವನ್ನು ಕೃಷಿ ಉಪಯೋಗಕ್ಕೆ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವ ಸಂದರ್ಭದಲ್ಲಿ ಲೋಕೇಶ್ ಮತ್ತು ಅವರ ಹೆಂಡತಿ ಬಂದು ದೈಹಿಕ ಹಲ್ಲೆ ನಡೆಸಿ ಜಾತಿ ನಿಂದನೆ ಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಬಂಧಿಸಲು ಒತ್ತಾಯ: ಆರೋಪಿಗಳನ್ನು ಸೋಮವಾರದ ಒಳಗೆ ಬಂಧಿಸಬೇಕು ಇಲ್ಲವಾದಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ದ. ಕ. ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ ನಂತರ ಬೆಳ್ತಂಗಡಿ ಆಸ್ಪತ್ರೆಗೆ ತೆರಳಿ ದೌರ್ಜನ್ಯಕ್ಕೊಳಗಾದ ಮಹಿಳೆಯ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು.