ಪುತ್ತೂರು: ಪುತ್ತೂರು ರೋಟರಿ ಚಾರಿಟೇಬಲ್ ಟ್ರಸ್ಟ್(ರಿ ) ವತಿಯಿಂದ ನ.14 ರಂದು ರೋಟರಿ ಟ್ರಸ್ಟ್ ಹಾಲ್ ನಲ್ಲಿ ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ( ಡಯಾಬಿಟಿಕ್ ಚಿಲ್ದ್ರೆನ್ಸ್ ಕೇರ್ ಸೆಂಟರ್) ಇದರ ಉದ್ಘಾಟನಾ ಕಾರ್ಯಕ್ರಮವು ನಡೆಯಲಿದೆ
ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ( ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ| ನಜೀರ್ ಡಯಾಬಿಟಿಕ್ ಸೆಂಟರ್ ಮತ್ತು EDRT ಬೆಂಗಳೂರು ಇವರ ಸಹಯೋಗದೊಂದಿಗೆ ರೂಪುಗೊಳಿಸಲಾಗಿದೆ.ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ. ವೈದ್ಯರು, ಔಷಧ ಮಾರಾಟಗಾರರು, ಶಾಲಾ ಮುಖ್ಯಸ್ಥರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಥವಾ ಇನ್ನಾವುದೇ ಸಹೃದಯಿ ನಾಗರಿಕರು ಇಂತಹ ಮಕ್ಕಳ ಬಗ್ಗೆ ಮಾಹಿತಿಯಿದ್ದಲ್ಲಿ ಮಕ್ಕಳ ಹೆಸರು ಮತ್ತು ವಿಳಾಸವನ್ನುನೀಡಬೇಕಾಗಿ ರೋಟರಿ ಕ್ಲಬ್ ವತಿಯಿಂದ ವಿನಂತಿಸಲಾಯಿತು. ಯೋಜನೆಗೆ ಆರ್ಥಿಕ ನೆರವು ಮತ್ತು ಬೆಂಬಲ ನೀಡಬಯಸುವ ದಾನಿಗಳು ರೋಟರಿ ಕ್ಲಬ್ ಅನ್ನು ಸಂಪರ್ಕಿಸಬಹುದು.