ಬೆಟ್ಟಂಪಾಡಿ: ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಆಂತರಿಕ ಗುಣಮಟ್ಟ ಭರವಸಾ ಕೋಶ, ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಏಕಾಗ್ರತೆಗಾಗಿ ಯೋಗ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ಆನ್ಲೈನ್ ತರಬೇತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳ ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕರು ಮತ್ತು ಸಲಹೆಗಾರರಾಗಿರುವ ಡಾ. ಉದಯಕುಮಾರ ಕೆ ಇವರು ಏಕಾಗ್ರತೆಯನ್ನು ಸಾಧಿಸಲು ಉಸಿರಾಟದಲ್ಲಿನ ಹಿಡಿತವೇ ಪ್ರಮುಖ ಸಾಧನ, ಹಾಗಯೇ ಉತ್ತಮ ಜೀವನ ನಡೆಸಲು ಯೋಗಾಭ್ಯಾಸದ ಜೊತೆಗೆ ಜೀವನ ಶೈಲಿ ಮತ್ತು ಆಹಾರಪದ್ದತಿಯೇ ಪ್ರಮುಖ ಕಾರಣ ಎಂದು ತಿಳಿಸಿದರು.
ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಬದುಕಿನ ಕಲೆಗೆ ವಿಶ್ವ ಮನ್ನಣೆ ಪಡೆದಿರುವ ಸಲುವಾಗಿ ಯೋಗ ದಿನಾಚರಣೆಯನ್ನು ನಾವು ಹೆಮ್ಮೆಯಿಂದ ಆಚರಿಸಬೇಕು, ಯೋಗ ಎಂದರೆ ಕೇವಲ ಆಸನಕಷ್ಟೇ ಸೀಮಿತವಲ್ಲ ಅದು ಜ್ಞಾನದ ವಿಸ್ತರಣೆ ಎಂದು ಅಭಿಪ್ರಾಯ ಪಟ್ಟರು.
ಗೂಗಲ್ ಮೀಟ್ ಮೂಲಕ ನಡೆದಂತಹ ಈ ಕಾರ್ಯಕ್ರಮ ಯುಟ್ಯೂಬ್ ಮೂಲಕ ನೇರ ಪ್ರಸಾರವಾಯಿತು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಾನಾಧಿಕಾರಿಗಳಾದ ದಾಮೊದರ ಗೌಡ ಕೆ ಇವರು ಸ್ವಾಗತಿಸಿದರು, ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಡಾ. ಪೊಡಿಯ ವಂದಿಸಿದರು, ಐಕ್ಯೂಎಸಿ ಸಂಚಾಲಕರು ಮತ್ತು ಏನ್ನೆಸ್ಸೆಸ್ ಅಧಕಾರಿಗಳಾದ ಹರಿಪ್ರಸಾದ್ ಎಸ್ ಕಾರ್ಯಕ್ರಮ ನಿರ್ವಹಿಸಿದರು.