ಪುತ್ತೂರು : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರಳ್ತಡ್ಕ ಪ್ರದೇಶದ ಬಡ ವರ್ಗಗಳು ಲಾಕ್ ಡೌನ್ ನಿಂದಾಗಿ ದಿನ ನಿತ್ಯದ ಆಹಾರ ಸಾಮಾಗ್ರಿಗಳಿಗೆ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಪಡುಮಲೆ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗದವರು ಅಲ್ಲಿನ ಸಮಸ್ಯೆಯ ಕುರಿತು ಅಶೋಕ್ ಕುಮಾರ್ ರೈ ಯವರಿಗೆ ತಿಳಿಸಿದಾಗ ಕೂಡಲೇ ಸ್ಪಂದಿಸಿದ ಅವರು, ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರಳ್ತಡ್ಕ ಕಾಲೋನಿಯ ಬಡ ಕುಟುಂಬಗಳಿಗೆ ಅಕ್ಕಿ , ತರಕಾರಿ, ದಿನಸಿಯ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ನೇರಳ್ತಡ್ಕ ಸಾಕ್ಷರತಾ ಕೇಂದ್ರದಲ್ಲಿ ವಿತರಿಸಿದರು.
ಪಡುಮಲೆ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ, ಪ್ರಕಾಶ್ ರೈ ಕೊಯಿಲ ,ಉದಯ ರಾವ್ ರಘರಾಮ ಪಾಟಾಳಿ, ಗುರುಪ್ರಸಾದ್ ರೈ ಕುದ್ಕಾಡಿ, ಭರತ್ ರಾಜ್ ರೈ ಆದರ್ಶ ಸೊಸೈಟಿ ಕುಂಬ್ರ, ಕೊಯಿಲ ಪಡುಮಲೆ ಹಾಲಿನ ಡೈರಿಯ ವ್ಯವಸ್ಥಾಪಕರಾದ ಮೋಹನ್ ಪಾಟಾಳಿ, ಉದ್ಯಮಿ ಪ್ರವೀಣ್ ಕುಮಾರ್,ಜಗನ್ನಾಥ ಗೌಡ ಕೊಯಿಲ, ಲಿಂಗಪ್ಪ ಗೌಡ ಮೊಡಿಕೆ,ಪ್ರವೀಣ್ ಪಾಟಾಳಿ ಮುಡಿಪಿನಡ್ಕ, ವಸಂತ ಗೌಡ ಕೊಯಿಲ,ಪ್ರಕಾಶ್ ನೇರಳ್ತಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಡುಮಲೆ ಅಭಿಮಾನಿ ಬಳಗದ ವತಿಯಿಂದ ಶಾಲು ಹಾಗೂ ಫಲಪುಷ್ಪ ನೀಡಿ ಅಶೋಕ್ ಕುಮಾರ್ ರೈ ಯವರನ್ನು ಸನ್ಮಾನಿಸಲಾಯಿತು.