ಪುತ್ತೂರು: ಬನ್ನೂರು ಆನೆಮಜಲು ಗೊನ್ಸಾಲ್ವಿಸ್ ಕಂಪೌಂಡ್ ದಿ.ಬೆಲ್ಚರ್ ಗೊನ್ಸಾಲ್ವಿಸ್‌ರವರ ಪತ್ನಿ ಲಿಲ್ಲಿ ಲೋಬೋ(93ವ.)ರವರು ವಯೋಸಹಜತೆಯಿಂದ ಜೂ.21 ರಂದು ಅಪರಾಹ್ನ ನಿಧನ ಹೊಂದಿದ್ದಾರೆ.
ಮೃತ ಲಿಲ್ಲಿ ಲೋಬೋರವರು ಪುತ್ರರಾದ ಬನ್ನೂರು ಆನೆಮಜಲ್ ಗೋನ್ಸಾಲ್ವಿಸ್ ಕಂಪೌಂಡ್‌ನ ನಿವಾಸಿಗಳಾದ ಚಾರ್ಲ್ಸ್ ಗೊನ್ಸಾಲ್ವಿ, ಲಿಯೋ ಗೊನ್ಸಾಲ್ವಿಸ್, ಡೆನ್ನಿಸ್ ಗೊನ್ಸಾಲಿಸ್, ವಲೇರಿಯನ್ ಗೊನ್ಸಾಲ್ವಿಸ್ ಮುಂಬಯಿ, ಗೊನ್ಸಾಲ್ವಿಸ್ ಅರ್ಥ್‌ಮೂವರ‍್ಸ್‌ನ ಮಾಲಕ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟ ಸದಸ್ಯ ಲಾರೆನ್ಸ್ ಗೊನ್ಸಾಲ್ವಿಸ್, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರು ಇನಾಸ್ ಗೊನ್ಸಾಲ್ವಿಸ್, ವಿಲ್ಫ್ರೆಡ್ ಗೊನ್ಸಾಲ್ವಿಸ್ , ಪುತ್ರಿ ಫ್ಲೇವಿ ಮಡಂತ್ಯಾರು, ಸೊಸೆಯಂದಿರಾದ ಐರಿನ್, ಲೀನಾ, ಲೆತ್ತಿಶಿಯಾ, ಮಾರ್ಗರೆಟ್, ರಾಜ್ಯ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಗ್ರೇಸಿ, ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಕಾರ್ಮಿನ್ ಪಾಸ್, ಅರಿಯಡ್ಕ ಸರಕಾರಿ ಶಾಲೆಯ ಶಿಕ್ಷಕಿ ಜ್ಯೋತಿ ರೆಬೆಲ್ಲೋ, ಅಳಿಯ ಮೌರಿಸ್ ಮೊರಾಸ್ ಮಡಂತ್ಯಾರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಬನ್ನೂರು ಸಂತ ಅಂತೋನಿ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ ಹಾಗೂ ಸಂತ ಫಿಲೋಮಿನಾ ಪ್ರೌಢ ಶಾಲೆಯ ಶಿಕ್ಷಕ ವೃಂದ, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಕೃಷ್ಣಮೋಹನ್, ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಹಾಗೂ ಸದಸ್ಯರು ಸಹಿತ ಹಲವರು ಆಗಮಿಸಿ ಸಾಂತ್ವನ ನುಡಿದಿದ್ದಾರೆ. ಮೃತರ ಅಂತ್ಯಕ್ರಿಯೆಯು ಜೂನ್ 22 ರಂದು ಬನ್ನೂರು ಸಂತ ಅಂತೋನಿ ಚರ್ಚ್‌ನ ಸಿಮೆತರಿಯಲ್ಲಿ ಬೆಳಿಗ್ಗೆ ಜರಗಲಿದೆ ಎಂದು ಮೃತ ಲಿಲ್ಲಿ ಲೋಬೋರವರ ಕುಟುಂಬ ಮೂಲಗಳು ತಿಳಿಸಿದೆ.