ಕೇಪು :ಕೇಪು ಗ್ರಾಮ ಪಂಚಾಯತ್ ವತಿಯಿಂದ ನೀರ್ಕಜೆಯಲ್ಲಿ ಕೋವಿಶಿಲ್ಡ್ ಲಸಿಕೆ 18 ರಿಂದ 44 ವಯಸ್ಸಿನವರಿಗೆ ಪ್ರಥಮ ಡೋಸ್ ಮತ್ತು 45 ರಿಂದ ಮೇಲ್ಪಟ್ಟವರಿಗೆ ಅಂದರೆ ಆಟೋ ಚಾಲಕರು,ಕಟ್ಟಡ ಕಾರ್ಮಿಕರು ಮತ್ತು ಗ್ರಾಮಸ್ಥರಿಗೆ ಲಸಿಕಾ ಕಾರ್ಯಕ್ರಮವು ಜೂ.21 ರಂದು ನಡೆಯಿತು.
ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಯಶಸ್ವಿನಿ ಶಾಸ್ತ್ರಿ , ಉಪಾಧ್ಯಕ್ಷರಾದ ರಾಘವ ಸಾರಡ್ಕ , ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸದಸ್ಯರಾದ ಶ್ರೀಮತಿ ಧರ್ಮಲತಾ ,ಹೇಮಾ, ಚಂದ್ರಶೇಖರ, ಸಂತೋಷ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ,ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ಲಸಿಕೆ ನೀಡುವ ಕಾರ್ಯಕ್ರಮ ನಡೆಸಲಾಯಿತು. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್ ಸದಸ್ಯರಾದ ಜಗಜೀವನರಾವ್ ಶೆಟ್ಟಿ, ಪುರುಷೋತ್ತಮ ಕಲಂಗಳ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಒಟ್ಟು 500 ಜನರಿಗೆ ಲಸಿಕೆ ನೀಡಲಾಯಿತು.