ಪುತ್ತೂರು, ಕೊರನಾ ಲಾಕ್ಡೌನ್ ನಿಂದ ಪುತ್ತೂರಿನ ಉದ್ಯಮ ಕ್ಷೇತ್ರ ಕಂಗೆಟ್ಟಿದ್ದು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಉದ್ಯಮಿಗಳ ಬೆಂಬಲಕ್ಕೆ ರೋಟರಿ ಕ್ಲಬ್ ಪುತ್ತೂರು ಯುವ ಮುಂದೆ ಬಂದಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಹಾಗೂ ನಗರಸಭಾ ಪೌರಾಯುಕ್ತ ಮಧುಸೂದನ್ ಅವರನ್ನು ಭೇಟಿ ಮಾಡಿದ ರೋಟರಿ ಯುವ ಅಧ್ಯಕ್ಷ ಹರ್ಷ ಕುಮಾರ ರೈ ಮಾಡಾವು ಅವರು ಈ ವರ್ಷದ ಉದ್ಯಮ ಪರವಾನಿಗೆ ಶುಲ್ಕ ಮನ್ನಾ ಮಾಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕ್ಲಬ್‌ನ ಕಾರ್ಯದರ್ಶಿ ಉಮೇಶ್ ನಾಯಕ್ ಹಾಗು ನಿಯೋಜಿತ ಅಧ್ಯಕ್ಷ ಭರತ್ ಪೈ ಉಪಸ್ಥಿತರಿದ್ದರು.