ಪುತ್ತೂರು : ನೆಟ್ ವರ್ಕ್ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಶೀಘ್ರವಾಗಿ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸಲು ಕೋಡಿಂಬಾಡಿ ಮೊಬೈಲ್ ಬಳಕೆದಾರರ ನೆಟ್ ವರ್ಕ್ ಸಮಸ್ಯೆಯ ಹೋರಾಟ ಸಮಿತಿಯಿಂದ ಏರ್ ಟೆಲ್ ನ ಪುತ್ತೂರು ತಾಲೂಕು ಸೇಲ್ಸ್ ಡಿಸ್ಟ್ರಿಬ್ಯೂಟರ್ ಆದ ವಸಂತಿ ಭಟ್ ಹಾಗೂ ಪುತ್ತೂರು ತಾಲೂಕಿನ ಬಿ.ಎಸ್.ಎನ್. ಎಲ್ ಪ್ರಧಾನ ಕಚೇರಿಯ ವ್ಯವಸ್ಥಾಪಕರಾದ ಆನಂದ್ ರವರಿಗೆ ಮನವಿ ಸಲ್ಲಿಸಲಾಯಿತು.
ಕೋಡಿಂಬಾಡಿ ಗ್ರಾಮ ಪಂಚಾಯಿತಿಯ ಕೇಂದ್ರ ಭಾಗದ ವಿನಾಯಕ ನಗರದಲ್ಲಿ ಕಾರ್ಯಚರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಸಂಸ್ಥೆಯು ಕಳೆದ 1 ವರ್ಷಗಳಿಂದ ಕಳಪೆ ಸೇವೆ ದೊರಕುತ್ತಿದ್ದು, ಪವರ್ ಕಟ್ ಆದಾಗ ಜನರೇಟರ್ ಸೌಲಭ್ಯವು ಇರುವುದಿಲ್ಲ ಮತ್ತು ಕೋಡಿಂಬಾಡಿ ಗ್ರಾಮ ವ್ಯಾಪ್ತಿಯ ಸೇಡಿಯಾಪು, ಶಾಂತಿನಗರ ,ಮಠಂತಬೆಟ್ಟು, ಬೆಳ್ಳಿಪ್ಪಾಡಿ ಮೊದಲಾದ ಕಡೆಗಳಲ್ಲಿ ನೆಟ್ವರ್ಕ್ ಕೂಡ ದೊರಕುತ್ತಿಲ್ಲ. ಆದುದರಿಂದ ಗ್ರಾಹಕರಾದ ನಮಗೆ ಒಳ್ಳೆಯ ಸೇವೆಯನ್ನು ಒದಗಿಸಬೇಕು ಮತ್ತು ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಉದ್ಯೋಗಿಗಳು(work from home) , ವಿದ್ಯಾರ್ಥಿಗಳು ( online class), ಸರ್ಕಾರಿ ಮತ್ತು ಖಾಸಗಿ ಕಛೇರಿಗಳು ಹಾಗೂ ಜನಸಾಮಾನ್ಯರು ಕೂಡ ನಿರಂತರ ತೊಂದರೆಗೊಳಪಡುತಿದ್ದು ಈ ಬಗ್ಗೆ ತಾವು ಸೂಕ್ತ ಕ್ರಮ ವಹಿಸಿ ನೆಟ್ ವರ್ಕ್ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಅಧ್ಯಕ್ಷರಾದ ವಿಕ್ರಂ ಶೆಟ್ಟಿ ಅಂತರ, ಕಾರ್ಯದರ್ಶಿಗಳಾದ ಗುಣಕರ ಏಕ, ಪದಾಧಿಕಾರಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ, ಜಗದೀಶ್ ಕಜೆ ,ಪ್ರಭಾಕರ ಸಾಮಾನಿ, ಸುರೇಶ್ ಕೃಷ್ಣಗಿರಿ ,ಸುಭಾಸ್ ರವಿ ದಡಿಕ್ಕೆತ್ತಾರು ಉಪಸ್ಥಿತರಿದ್ದರು.