ಪುತ್ತೂರು : ದ.ಕ ಜಿಲ್ಲೆಯಲ್ಲಿ ಜಿಲ್ಲಾಡಳಿತವೂ ಕೂಡ ಜೂ. 23ರಿಂದ ಅನ್ ಲಾಕ್ ಘೋಷಣೆ ಮಾಡಿದೆ. ಕೆಲವು ತಿಂಗಳುಗಳ ಬಳಿಕ ಅಂಗಡಿ ಮುಂಗಟ್ಟುಗಳನ್ನು ತೆರೆದರೂ ಕೂಡಾ ವ್ಯಾಪಾರ ಮಾತ್ರ ಸ್ವಲ್ಪವೇ ಪ್ರಮಾಣದಲ್ಲಿ ನಡೆಯುತ್ತಿದೆ.ಮತ್ತೊಂದೆಡೆ ಲಾಕ್ ಡೌನ್ ಸಡಿಲಗೊಳಿಸಿದ ಹಿನ್ನೆಲೆ ಜನ ಪೇಟೆ ಕಡೆ ಮುಖ ಮಾಡಿದ್ದು,ಕೆಲ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಸ್ವಲ್ಪ ಮಟ್ಟಿನ ಅಡಚಣೆ ಉಂಟಾಯಿತು. ವಾಹನ ಗಳ ಸಂಖ್ಯೆಯೂ ಹೆಚ್ಚೇನೂ ಕಂಡು ಬರಲಿಲ್ಲ.
ಬಸ್ ಸಂಚಾರಕ್ಕೆ ಮಧ್ಯಾಹ್ನ 2 ಗಂಟೆಯವರೆಗೆ ಅನುಮತಿ ನೀಡಿದ್ದರೂ ಸಹ ಜನ ಬಸ್ ನಿಲ್ದಾಣಗಳತ್ತ ಮುಖ ಮಾಡದೇ ಇರುವುದು ಕಂಡು ಬರುತ್ತಿದೆ.