ಪುತ್ತೂರು : ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಪ್ರಥಮ ದರ್ಜೆ ಕಾಲೇಜು ಪುತ್ತೂರಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ಸ್ಮಾರ್ಟ್ ತರಗತಿಯ ಉದ್ಘಾಟನೆ ಮತ್ತು ಟ್ಯಾಬ್ಲೆಟ್ ಪಿಸಿಯ ವಿತರಣಾ ಕಾರ್ಯಕ್ರಮವು ಜೂ.23 ರಂದು ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರಿನ ತಹಶೀಲ್ದಾರ್ ರಮೇಶ್ ಬಾಬು ಕೆಎಎಸ್ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಡಿಸಿಇ ಪ್ರಾದೇಶಿಕ ಕಚೇರಿಯ ವಿಶೇಷ ಅಧಿಕಾರಿಗಳಾದ ಜಯಕರ್ ಭಂಡಾರಿ, ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಂಜೀವ ಮಠಂದೂರು ರವರು ಉಪಸ್ಥಿತರಿದ್ದರು.