ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಆರೋಪಿ ಪೀಟರ್ನ ತಾಯಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಹಾಡಹಗಲೇ, ದುಷ್ಕರ್ಮಿಗಳು, ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್ನಲ್ಲಿ ರೇಖಾ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಕೂಡಲೇ ರೇಖಾರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಅಂದ್ಹಾಗೆ ರೇಖಾ ಅವರ ಬಾಡಿಗಾರ್ಡ್ ಆಗಿದ್ದ ಪೀಟರ್ ಈ ಕೃತ್ಯ ನಡೆಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಇಂದು ರೇಖಾ ಫುಡ್ ಕಿಟ್ ಹಂಚಲು ಬಿಜೆಪಿ ವಾರ್ಡ್ ಕಚೇರಿಗೆ ಬಂದಿದ್ದ ವೇಳೆ ಜೊತೆಗೇ ಇದ್ದ ಪೀಟರ್ ಮತ್ತು ಸಹಚರರಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. ಮೊದಲೇ ಪ್ಲಾನ್ ಮಾಡಿದ್ದ ಆರೋಪಿಗಳು ಏರಿಯಾದ ಒಟ್ಟು 7 ಸಿಸಿ ಕ್ಯಾಮರಗಳನ್ನ ತಿರುಚಿ, ಕೊಲೆಗೈದಿದ್ದಾರೆ. ಪೀಟರ್ ಹಾಗೂ ಮತ್ತೋರ್ವ ಆರೋಪಿ ಸ್ಪೀಫನ್ ರೇಖಾ ಪತಿ ಕದೀರೇಶ್ ಕೊಲೆಯಲ್ಲಿ ಆರೋಪಿಗಳಾಗಿದ್ರು. ಸ್ಟೀಫನ್ ಕದಿರೇಶನ ತಂಗಿಯ ಗಂಡ. ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಬಂದಿದ್ದ.
ಕೊಲೆ ಹಿಂದೆ ಪೀಟರ್ ಕೈವಾಡವಿರೋ ಶಂಕೆ ದಟ್ಟವಾಗಿದೆ. ಈ ಹಿನ್ನೆಲೆ ಪೊಲೀಸರು ಪೀಟರ್ನ ತಾಯಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.