ಪುತ್ತೂರು: ಪುತ್ತೂರು ತಾಲೂಕಿನ ಬನ್ನೂರು ನಿವಾಸಿ ಆಟೋ ಚಾಲಕ ಜಗದೀಶ್ ಹೆಗ್ಡೆ ಕೊರೊನಾ ಕಾಯಿಲೆಯಿಂದಾಗಿ ಮರಣ ಹೊಂದಿದ್ದು , ಅವರ ಮನೆಯ ಪರಿಸ್ಥಿತಿಯ ಬಗ್ಗೆ ವಿಚಾರ ತಿಳಿದ ಗೃಹ ರಕ್ಷಕ ದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಂಡೆಂಟ್ ಡಾ.ಮುರಳಿ ಮೋಹನ್ ಚೂಂತಾರು ಮತ್ತು ಸಿಬ್ಬಂದಿಗಳು ಆಹಾರ ಸಾಮಾಗ್ರಿಗಳ ಕಿಟ್ ಹಾಗೂ ಧನ ಸಹಾಯ ನೀಡುವ ಮೂಲಕ ಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದರು.
ಈ ಸಂದರ್ಭದಲ್ಲಿ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ, ಸಾರ್ಜೆಂಟ್ ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.