ಬೆಂಗಳೂರು:ನಗರದ ಗಾಯತ್ರಿ ವಿಹಾರ್, ಅರಮನೆ ಮೈದಾನದಲ್ಲಿ ಜೂನ್ 20ರಂದು ಸಂಜೆ ನಡೆದ ವಿಶೇಷ ಸಮಾರಂಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರ್ನಾಟಕ ಟಿವಿ ವತಿಯಿಂದ ‘ಜನನಾಯಕ ಲೀಡರ್ ಪ್ರಶಸ್ತಿ’ ಪ್ರದಾನಿಸಲಾಯಿತು.
ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಪುತ್ತಿಲ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದು, ಅವರ ಸಾಮಾಜಿಕ ಸೇವೆ ಹಾಗೂ ಜನಪರ ಕಾರ್ಯಗಳನ್ನು ಪ್ರಶಂಸಿಸಲಾಯಿತು. ಪುತ್ತೂರಿನಿಂದಲೂ ಹಲವು ಕಾರ್ಯಕರ್ತರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು.



























