ಪುತ್ತೂರು: ಪುತ್ತೂರಿನ ಹಿರಿಯ ಜಿನಸು ವ್ಯಾಪಾರಿ ಹಾಗೂ ಉದ್ಯಮಿ ಇಂದಾಜೆ ವಿನಾಯಕ ನಾಯಕ್ (79) ಅವರು ಮಂಗಳವಾರ (ಆ. 4) ನಿಧನರಾದರು.
ಅವರು ಪುತ್ತೂರಿನ ವ್ಯಾಪಾರ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ವ್ಯಾಪಾರ ವಲಯ ಹಾಗೂ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಬುಧವಾರ (ಆ. 5) ಬೆಳಿಗ್ಗೆ ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ವರದರಾಜ ಬಜಾರ್ ಸಂಸ್ಥೆಯಲ್ಲಿನ ಪುತ್ರ ವೆಂಕಟ್ರಮಣ ನಾಯಕ್ ಅವರ ನಿವಾಸಕ್ಕೆ ತರಲಾಗುವುದು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಪುತ್ರರಾದ ವೆಂಕಟ್ರಮಣ ನಾಯಕ್ ಹಾಗೂ ಕೃಷ್ಣಾನಂದ ನಾಯಕ್ ಮಾಹಿತಿ ನೀಡಿದ್ದಾರೆ.




























