ಕಡಬ: ಪೆರಾಬೆ ಗ್ರಾಮದ ಕೋಡಿಯಡ್ಕ ನಿವಾಸಿ ದಿ. ಕುಂಞಣ್ಣ ಗೌಡ ಅವರ ಪುತ್ರ ಶೇಖರ ಗೌಡ (43) ಅವರು ಎರ್ಮಾಳ ರಕ್ಷಿತಾರಣ್ಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಸೆ.17ರ ರಾತ್ರಿ ಶೇಖರ ಗೌಡ ಅವರು ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಬಳಿಕ ಸ್ಕೂಟಿಯನ್ನು ಸಂಬಂಧಿಕರೊಬ್ಬರ ಮನೆಯಲ್ಲಿ ಇರಿಸಿ ಎರ್ಮಾಳ ರಕ್ಷಿತಾರಣ್ಯಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.
ಸೆ.18ರಂದು ಬೆಳಗ್ಗೆ ಸ್ಥಳೀಯರು ಹುಡುಕಾಟ ನಡೆಸಿದಾಗ, ಕಾಡಿನೊಳಗೆ ಮರದ ಕೊಂಬೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರರನ್ನು ಅಗಲಿದ್ದಾರೆ.



























