ಬೆಳ್ತಂಗಡಿ: ಬೆಳ್ತಂಗಡಿ ಹಳೆಪೇಟೆಯ ಖಾಸಗಿ ವಿದ್ಯಾಸಂಸ್ಥೆ ಬಳಿ ಕೆ.ಎಸ್.ಆರ್. ಟಿ.ಸಿ. ಬಸ್ಸೊಂದು ರಸ್ತೆ ಬಿಟ್ಟು ಡಿವೈಡರ್ ಮೇಲೆರಿದ ಘಟನೆ ಸಂಭವಿಸಿದೆ.
ಮಂಗಳೂರು ವಿಭಾಗಕ್ಕೆ ಸೇರಿದ ಮಂಗಳೂರಿನಿಂದ ಧರ್ಮಸ್ಥಳಕ್ಕೆ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ಬಸ್ ಹೆದ್ದಾರಿಯ ಬದಿಯ ಡಿವೈಡರ್ ಮೇಲೇರಿದ ರಭಸಕ್ಕೆ ಸುಮಾರು 10 ಮೀ. ಗಿಂತ ಅಧಿಕ ಉದ್ದಕ್ಕೆ ಡಿವೈಡರ್ ಸಂಪೂರ್ಣ ಹಾನಿಗೀಡಾಗಿದೆ.
ಕಬ್ಬಿಣದ ತಡೆ ಬೇಲಿ, ದಾರಿದೀಪದ ಕಂಬ ಪುಡಿ ಪುಡಿಯಾಗಿದೆ. ತಡೆ ಬೇಲಿಯ ಕಬ್ಬಿಣದ ರಾಡ್ ಬಸ್ ನ ಮುಂಭಾಗದಿಂದ ಒಳ ನುಗ್ಗಿ ಚಾಲಕನ ಸ್ಟೇರಿಂಗ್ ಬಳಿಯಿಂದ ಆತನ ಹಿಂಭಾಗದ ಎರಡನೇ ಸೀಟ್ ನವರೆಗೂ ನುಗ್ಗಿದೆ. ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಳ್ತಂಗಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


























