ಪುರುಷರ ಫ್ಯಾಶನ್ ಪ್ರಿಯರಿಗೆ ಮತ್ತೊಂದು ಹೊಸ ತಾಣವಾಗಿ ‘ಕ್ಯಾಪ್ಟರ್ ಮೆನ್ಸ್ ಹಬ್’ ಮಳಿಗೆಯು ಜೂನ್ 29ರಂದು ಕುಂಬ್ರ ಸೆಂಟರ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಆಧುನಿಕ ಟ್ರೆಂಡ್‌ಗೆ ಅನುಗುಣವಾಗಿ ಪುರುಷರ ಉಡುಪುಗಳು ಹಾಗೂ ಅಕ್ಸೆಸರೀಸ್‌ಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಮಳಿಗೆಯನ್ನು ಆರಂಭಿಸಲಾಗುತ್ತಿದೆ. ಫಾರ್ಮಲ್, ಕ್ಯಾಶುಯಲ್, ಎಥ್ನಿಕ್ ವೇರ್ ಸೇರಿದಂತೆ ವಿವಿಧ ವಿನ್ಯಾಸಗಳ ಉಡುಪುಗಳ ಜೊತೆಗೆ ವಾಚ್ ಹಾಗೂ ಇತರ ಫ್ಯಾಶನ್ ಅಕ್ಸೆಸರೀಸ್‌ಗಳು ಇಲ್ಲಿ ಲಭ್ಯವಿರಲಿವೆ.
“Dress Up Your Style” ಎಂಬ ಘೋಷವಾಕ್ಯ ಹಾಗೂ “Style That Defines You” ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಲಿರುವ ಈ ಮಳಿಗೆಯು ಗುಣಮಟ್ಟದ ಉತ್ಪನ್ನಗಳು ಮತ್ತು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸೇವೆ ನೀಡಲಿದೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.



























