ಪುತ್ತೂರು: ಜಿಮ್ ಟ್ರೈನರ್ ಆಗಿದ್ದ ಸಚಿನ್ ರೈ ಮೃತಪಟ್ಟ ಘಟನೆ ಕಲ್ಲಿಮಾರ್ ಎಂಬಲ್ಲಿ ನಡೆದಿದ್ದುಈ ಬಗ್ಗೆ ಮೃತರ ತಾಯಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಮೂಲತ ಮಡoತ್ಯಾರ್ ನಿವಾಸಿ ಪ್ರಸ್ತುತ ಪುತ್ತೂರಿನ ಕಲ್ಲಿಮಾರ್ ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಸಚಿನ್ ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿದ್ದರು.
ಜು.05 ರಂದು ಬೆಳಗ್ಗೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತರು ತಾಯಿ ಗುಲಾಬಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸಚಿನ್ ರೈ ಅವರ ಸಾವಿನಲ್ಲಿ ಸಂಶಯವಿದೆ ಎಂದು ಅವರ ತಾಯಿ ಗುಲಾಬಿ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
























