ಪುತ್ತೂರು: ನಗರದ ಮುಖ್ಯ ರಸ್ತೆಯಲ್ಲಿರುವ ಕೃಷ್ಣ ಪ್ರಸಾದ್ ಬಿಲ್ಡಿಂಗ್‌ನ 2ನೇ ಮಹಡಿಯಲ್ಲಿ ಆರಂಭವಾಗುತ್ತಿರುವ ಸ್ವಾತಿ ಆಕೃತಿ ವೆಲ್‌ನೆಸ್ ಸಂಸ್ಥೆಯ ಭವ್ಯ ಉದ್ಘಾಟನಾ ಸಮಾರಂಭವು 2026ರ ಜುಲೈ 13ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕಿ ಸ್ವಾತಿ ಬಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮುಳಿಯ ಗ್ರೂಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿರ್ದೇಶಕಿ ಅಶ್ವಿನಿ ಕೃಷ್ಣ ನಾರಾಯಣ ಮುಳಿಯ, ವೈದ್ಯಾರ್ಸ್ ಆಯುರ್ವೇದ ಆಸ್ಪತ್ರೆಯ ಪ್ರೊಪ್ರೈಟರ್ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಜನ, ಎಸ್‌ಜಿಕೆ ಫರ್ನಿಚರ್‌ನ ಕೆ. ಕೃಷ್ಣ ಕಾಮತ್ ಹಾಗೂ ಉದ್ಯಮಿ ಉಮೇಶ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ವೆಲ್‌ನೆಸ್ ಕೇಂದ್ರವು ಯೋಗ ಮತ್ತು ಸಮಗ್ರ ಆರೋಗ್ಯ ಸೇವೆಗಳ ಮೂಲಕ ಜನರ ಆರೋಗ್ಯ ಮತ್ತು ಜೀವನಶೈಲಿಯ ಸುಧಾರಣೆಗೆ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ.
ಕಾರ್ಯಕ್ರಮವು ಕೃಷ್ಣ ಪ್ರಸಾದ್ ಬಿಲ್ಡಿಂಗ್, 2ನೇ ಮಹಡಿ, ಮುಖ್ಯ ರಸ್ತೆ, ಅರುಣ ಕಲಾ ಮಂದಿರದ ಎದುರು, ಕೆನರಾ ಬ್ಯಾಂಕ್ ಮೇಲ್ಭಾಗ, ಪುತ್ತೂರು – 574201 ಇಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಗತಿ ಹಾಸ್ಪಿಟಲ್ ನ ಡಾ. ಅನನ್ಯ ಲಕ್ಷ್ಮೀ ಸಂದೀಪ್, ಉದ್ಯಮಿ ಉಮೇಶ್ ಕೆ. ಉಪಸ್ಥಿತರಿದ್ದರು.

























