ವಿಟ್ಲ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ವಿಟ್ಲ ನಗರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಟ್ಲ ಪಿಎಂಶ್ರೀ ಶಾಲೆಯಲ್ಲಿ ಸಿಎಸ್‌ಆರ್ (CSR) ಅನುದಾನದಿಂದ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಉದ್ಘಾಟಿಸಿದ ಅವರು, ತಮ್ಮ ಸಹಕಾರದಿಂದ ಶಾಲೆಗೆ ಒದಗಿಸಲಾದ ಸ್ಮಾರ್ಟ್ ಟಿವಿ ಆಧಾರಿತ ಸ್ಮಾರ್ಟ್ ಕ್ಲಾಸ್‌ನ್ನೂ ಉದ್ಘಾಟಿಸಿದರು. ಬಳಿಕ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಉಪಕೇಂದ್ರದ ಕಾಮಗಾರಿಯನ್ನು ಪರಿಶೀಲಿಸಿ, ಸಂಸದರ ಪ್ರದೇಶಾಭಿವೃದ್ಧಿ ನಿಧಿ (MPLADS) ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ ನೆರವೇರಿಸಿದರು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ, ಸದಸ್ಯರಾದ ರವಿವರ್ಮ, ಪ್ರವೀಣ್ ಮಾಡತ್ತಡ್ಕ ಹಾಗೂ ಉದ್ಯಮಿ ಸುಬ್ರಾಯ ಪೈ ಉಪಸ್ಥಿತರಿದ್ದರು.
ಆರೋಗ್ಯ ಉಪಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ಭಟ್ ಹಾಗೂ ಸಿಬ್ಬಂದಿಗಳಾದ ಜ್ಯೋತಿ ಸುನಿಲ್ ಮತ್ತು ಚೈತ್ರಾ ಲತೀಶ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಆಲಂಗಾರ್, ಕಾರ್ಯದರ್ಶಿ ಹರೀಶ್ ಸಿ.ಎಚ್., ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ಮತ್ತು ವಿದ್ಯಾಧರ ಜೈನ್, ಕಾರ್ಯದರ್ಶಿಗಳಾದ ಶ್ರೀಕೃಷ್ಣ ವಿಟ್ಲ ಹಾಗೂ ಪುನೀತ್ ಮಾಡತ್ತಾರ್, ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸದಸ್ಯ ರವಿಪ್ರಕಾಶ್ ಸೇರಿದಂತೆ ನಿತಿನ್ ಬೊಡ್ಡೊಣಿ, ಜಗದೀಶ್ ಪಾಣೆಮಜಲು, ಸದಾನಂದ ಗೌಡ ಸೇರಾಜೆ, ಶಿಶಿರ್ ಗೌಡ, ಶರತ್ ಎನ್.ಎಸ್., ತೀರ್ಥೇಶ್ ಇರಂದೂರು, ಪ್ರಕಾಶ್ ಕೈಂತಿಲ, ವಿಶ್ವನಾಥ ನಾಯ್ತೊಟ್ಟು, ಪುರಂದರ ಅಂಚನ್, ವೀರಪ್ಪ ಗೌಡ ಹಾಗೂ ರಾಮದಾಸ್ ಶೆಣೈ ಉಪಸ್ಥಿತರಿದ್ದರು.
























