Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

    ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

    ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

    ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

    ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!

    ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಕಡವೆ ಮೃತ್ಯು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪುತ್ತೂರು : ಬಸ್ ಮಾರ್ಗ ಬದಲಾವಣೆ: ವಿದ್ಯಾರ್ಥಿಯ ಉಚಿತ ಪ್ರಯಾಣ ಸೌಲಭ್ಯ ನಿರಾಕರಣೆ; ಮುಖ್ಯಮಂತ್ರಿಗೆ ದೂರು..!

August 14, 2026
in Featured, ಪುತ್ತೂರು
0
ಪುತ್ತೂರು : ಬಸ್ ಮಾರ್ಗ ಬದಲಾವಣೆ: ವಿದ್ಯಾರ್ಥಿಯ ಉಚಿತ ಪ್ರಯಾಣ ಸೌಲಭ್ಯ ನಿರಾಕರಣೆ; ಮುಖ್ಯಮಂತ್ರಿಗೆ ದೂರು..!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಉಪ್ಪಿನಂಗಡಿ: ಪುತ್ತೂರಿನ ಹಾರಾಡಿ ಬಳಿ ರಸ್ತೆ ವಿಸ್ತರಣಾ ಕಾಮಗಾರಿ ಹಿನ್ನೆಲೆಯಲ್ಲಿ ಬಸ್‌ಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ, ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಉಪ್ಪಿನಂಗಡಿಗೆ ಬಸ್ ಏರಿದ ವಿದ್ಯಾರ್ಥಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನಿರಾಕರಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ವಿದ್ಯಾರ್ಥಿಯೋರ್ವ ಮುಖ್ಯಮಂತ್ರಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Advertisement
Advertisement

ಪುತ್ತೂರಿನಿಂದ ಉಪ್ಪಿನಂಗಡಿಗೆ ಸಂಚರಿಸುವ ಬಸ್‌ಗಳು ಸಾಮಾನ್ಯವಾಗಿ ಬೊಳ್ವಾರ್ ಮಾರ್ಗವಾಗಿ ತೆರಳುತ್ತವೆ. ಈ ಹಿನ್ನೆಲೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಬೊಳ್ವಾರ್ ಜಂಕ್ಷನ್‌ನಲ್ಲಿ ಬಸ್ ಏರಿ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದರು. ಆದರೆ ಹಾರಾಡಿ ಬಳಿ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

Advertisement
Advertisement

ಇದರಿಂದ ಉಪ್ಪಿನಂಗಡಿ ಕಡೆಗೆ ತೆರಳುವ ಬಸ್‌ಗಳು ಬೊಳ್ವಾರ್ ಮಾರ್ಗವನ್ನು ಬಿಟ್ಟು ಪುತ್ತೂರು ಬಸ್ ನಿಲ್ದಾಣದಿಂದ ಎಪಿಎಂಸಿ ಮಾರ್ಗವಾಗಿ ತೆರಳಿ ಕೋಟೇಚಾ ಹಾಲ್ ಬಳಿ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುತ್ತಿವೆ. ಹೀಗಾಗಿ ಬೊಳ್ವಾರ್‌ನಲ್ಲಿ ಬಸ್ ಏರುತ್ತಿದ್ದ ಪ್ರಯಾಣಿಕರು ಇದೀಗ ಬಸ್ ನಿಲ್ದಾಣದಿಂದಲೇ ಬಸ್ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಆ.12ರಂದು ಸಂಜೆ ಸುಮಾರು 3.30ಕ್ಕೆ ಪುತ್ತೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದ ವಿವೇಕಾನಂದ ಕಾಲೇಜಿನ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿ, ಉಪ್ಪಿನಂಗಡಿಯ ದೂಜಮೂಲೆ ನಿವಾಸಿ ಜಿತೇಶ್ ಎನ್. ಸೇರಿದಂತೆ ನಾಲೈದು ವಿದ್ಯಾರ್ಥಿಗಳಿಗೆ ಬಸ್ ನಿರ್ವಾಹಕರು ಪೂರ್ಣ ಟಿಕೆಟ್ ದರ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಬಸ್ ಪಾಸ್‌ನಲ್ಲಿ ಪ್ರಯಾಣ ಆರಂಭದ ಸ್ಥಳವಾಗಿ ‘ಬೊಳ್ವಾರ್’ ನಮೂದಾಗಿದ್ದು, ಬಸ್ ನಿಲ್ದಾಣದಿಂದ ಪ್ರಯಾಣ ಆರಂಭಿಸಿರುವುದು ನಿಯಮಬಾಹಿರ ಎಂದು ನಿರ್ವಾಹಕರು ತಿಳಿಸಿದ್ದಾರೆ ಎನ್ನಲಾಗಿದೆ. ಬೊಳ್ವಾರ್‌ನಲ್ಲಿ ಪ್ರಸ್ತುತ ಬಸ್ ಸಂಚಾರವೇ ಇಲ್ಲ ಎಂದು ವಿದ್ಯಾರ್ಥಿಗಳು ವಿವರಿಸಿದರೂ, ದೂರು ನೀಡಬೇಕಾದರೆ ನೀಡಬಹುದು, ಸದ್ಯ ಟಿಕೆಟ್ ದರ ಪಾವತಿಸಬೇಕು ಎಂದು ನಿರ್ವಾಹಕರು ಹೇಳಿ ಹಣ ಪಡೆದಿದ್ದಾರೆ ಎಂದು ಜಿತೇಶ್ ದೂರಿನಲ್ಲಿ ಆರೋಪಿಸಿದ್ದಾರೆ.

ವಾಹನ ಸಂಚಾರಕ್ಕೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಬಸ್‌ಗಳ ಮಾರ್ಗವನ್ನು ಬದಲಾಯಿಸಿರುವುದು ನಿಗಮದ ನಿರ್ಧಾರವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅಮಾನ್ಯ ಎಂದು ಪರಿಗಣಿಸಿರುವುದು ಸರ್ಕಾರ ನೀಡಿರುವ ಸೌಲಭ್ಯವನ್ನು ನಿರಾಕರಿಸಿದಂತಾಗಿದೆ ಎಂದು ಜಿತೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿರುವ ಜಿತೇಶ್, ಕೆಎಸ್ಸಾರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.

Previous Post

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಮೂಲಕ ಅನ್ಯಮತೀಯರ ಕಟ್ಟಡಕ್ಕೆ ಮಣ್ಣು ಸಾಗಾಟ – ಭಕ್ತರಿಂದ ಆಕ್ಷೇಪ, ಕ್ರಮಕ್ಕೆ ಆಗ್ರಹ..!!

Next Post

ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ಸ್ವಾತಂತ್ರೋತ್ಸವ ಹಾಗೂ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕೊಡುಗೆಗಳು..!!

OtherNews

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!
Featured

October 3, 2026
ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!
ಕ್ರೈಮ್

ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

October 3, 2026
ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!
Featured

ವಿಟ್ಲ: ಸ್ವಚ್ಛ ಭಾರತ್ ಮಿಷನ್‌ಗೆ ಉತ್ತೇಜನ:₹60.10 ಲಕ್ಷ ವೆಚ್ಚದ MRF ಘಟಕ ಉದ್ಘಾಟಿಸಿದ ಬ್ರಿಜೇಶ್ ಚೌಟ..!

October 3, 2026
ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!
ಪುತ್ತೂರು

ಅನಾರೋಗ್ಯ ಪೀಡಿತರಿಗೆ ಅರುಣ ಸಾರಥಿ ಆಟೋ ಚಾಲಕರ ಸಂಘದಿಂದ ಧನಸಹಾಯ..!

October 3, 2026
ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಕಡವೆ ಮೃತ್ಯು..!
Featured

ಗುಂಡ್ಯ–ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಕಡವೆ ಮೃತ್ಯು..!

October 3, 2026
ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ
Featured

ವಿಟ್ಲದಲ್ಲಿ ಹಣ ಪಣಕ್ಕಿಟ್ಟು ಕೋಳಿ ಅಂಕ: ನಾಲ್ವರು ವಶಕ್ಕೆ..!!

October 3, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

ಪುತ್ತೂರು: ವಿದ್ಯುತ್‌ ಸ್ಪರ್ಶಕ್ಕೆ ಲೈನ್‌ಮ್ಯಾನ್ ರವಿ ಬಲಿ..!!

October 3, 2026
ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

ಉಪ್ಪಿನಂಗಡಿ : ಮನೆಯಿಂದ 6 ಲಕ್ಷ ರೂ.ಗಳ ಚಿನ್ನಾಭರಣ ಕಳವು..!!

October 3, 2026
ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

ಮಂಗಳೂರು: ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ :₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಕಳವು ಸೊತ್ತು ವಶ..!

October 3, 2026
‘ಜೂಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಅರೆಸ್ಟ್..!

‘ಜೂಲಿ’ ಸಿನಿಮಾನಲ್ಲಿ ನಟನೆ ಮಾಡಿದ್ದ ಖ್ಯಾತ ಬಾಲಿವುಡ್ ನಟ ಅರೆಸ್ಟ್..!

October 3, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page