ಪುತ್ತೂರು: ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ.) ಪುತ್ತೂರು ಹಾಗೂ ಈದ್ ವೀಲಾದ್ ಸಮಿತಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ಅವರ 1501ನೇ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿರುವ 34ನೇ ಬೃಹತ್ ವೀಲಾದ್ ಸಮಾವೇಶದ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು.
ಕಾಲ್ನಡಿಗೆ ಜಾಥಕ್ಕೆ ರಾಜ್ಯ NSUI ಉಪಾಧ್ಯಕ್ಷ ಫಾರೂಕ್ ಬಯಾಬೆ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೀಲಾದ್ ಸಮಾವೇಶದ ಸಂಘಟಕರು, ವಿವಿಧ ಪದಾಧಿಕಾರಿಗಳು, ಯುವಜನ ಪರಿಷತ್ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರು.




























