ಪುತ್ತೂರು, ಆ.24: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.), ಪುತ್ತೂರು ವತಿಯಿಂದ ಸಾಮಾಜಿಕ ಸೇವೆಯ ನೆಲೆಯಲ್ಲಿ ಹಿರೇಬಂಡಾಡಿ ಗ್ರಾಮದ ನಂದಿನಿ ನಗರದ ನಿವಾಸಿಗಳಾದ ಪ್ರಸಾದ್ ಭಟ್ ಹಾಗೂ ವೇದಾವತಿ ದಂಪತಿಗಳ ಪುತ್ರಿ ವರಲಕ್ಷ್ಮಿಯವರ ಬಿ.ಫಾರ್ಮಾ ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿದ್ದ ಸಂಪೂರ್ಣ ₹1,50,000 ಶುಲ್ಕವನ್ನು ದಾನಿಗಳ ಸಹಕಾರದಿಂದ ನೀಡಲಾಯಿತು.
ಆ.24ರಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರು ನೆರವಿನ ಮೊತ್ತವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀರಾಮ್ ಭಟ್ ಪಾತಾಳ, ನಿರ್ದೇಶಕರಾದ ರಾಜು ಶೆಟ್ಟಿ ಹಾಗೂ ರಾಜೇಶ್ ಬೊಳುವಾರು ಸೇರಿದಂತೆ ಟ್ರಸ್ಟ್‌ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜದ ಅಗತ್ಯವಿರುವ ಕುಟುಂಬಗಳಿಗೆ ಸ್ಪಂದಿಸುತ್ತಿರುವ ಟ್ರಸ್ಟ್‌ನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.





























