ಪುತ್ತೂರು: ಇಲ್ಲಿನ ಬೊಳುವಾರು ಸಂಗಮ್ ಆಟೋ ಮೊಬೈಲ್ಸ್ ಸ್ಟೇರ್ ಪಾರ್ಟ್ಸ್ ಸಂಸ್ಥೆಯ ಮಾಲಕ ದಾಮೋದರ್ ಗೌಡ ಮಳುವೇಲು(67ವ)ರವರು ಆ.29ರ ನಸುಕಿನ ಜಾವ ನಿಧನರಾದರು.
ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಮೂಲದ ದಾಮೋದರ್ ಗೌಡ ಅವರು ಉರ್ಲಾಂಡಿಯಲ್ಲಿ ವಾಸ್ತವ್ಯ ಹೊಂದಿದ್ದರು.ರಾತ್ರಿ ಆರೋಗ್ಯದಲ್ಲಿ ಏರುಪೇರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಮೃತರು ಪತ್ನಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಕಿರಿಯ ತರಬೇತು ಅಧಿಕಾರಿಯಾಗಿರುವ ಸುಲೋಚನಾ, ಪುತ್ರ ಬೆಂಗಳೂರಿನಲ್ಲಿ ಸರಕಾರಿ ಉದ್ಯೋಗಿಯಾಗಿರುವ ಹರ್ಷ ಮತ್ತು ಸಹೋದರರಾದ ಬಾಲಕೃಷ್ಣ, ಚಂದ್ರಶೇಖರ, ಕೇಶವ, ಉಮೇಶ್ ಗೌಡ ಮಳುವೇಲು ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.





























