ಪುತ್ತೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಅರಣ್ಯ ಸಂಚಾರಿ ದಳದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾಮೆತ್ತಡ್ಕದ ಪ್ರವೀಣ್ ಕುಮಾರ್ ಶೆಟ್ಟಿಯವರು ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿಗೊಂಡಿದ್ದು ಮಂಗಳೂರು ವೃತ್ತದ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ತಾಂತ್ರಿಕ ಸಹಾಯಕರಾಗಿ ವರ್ಗಾವಣೆಗೊಂಡಿದ್ದಾರೆ.
1992ರಲ್ಲಿ ಕುಂದಾಪುರದಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ ಪ್ರವೀಣ್ ಕುಮಾರ್ ಶೆಟ್ಟಿಯವರು ಬಳಿಕ ಮಂಗಳೂರು, ಬೆಳ್ತಂಗಡಿಯಲ್ಲಿ ಸೇವೆ ಸಲ್ಲಿಸಿದ್ದರು. 2007ರಲ್ಲಿ ಬೆಳ್ತಂಗಡಿಯಲ್ಲಿರುವಾಗ ವಲಯಾರಣ್ಯಾಧಿಕಾರಿಯಾಗಿ ಪದೋನ್ನತಿಗೊಂಡು ಪುತ್ತೂರು ಗೇರು ನಿಗಮಕ್ಕೆ ವರ್ಗಾವಣೆಯಾದರು. ಅಲ್ಲಿಂದ ಪಂಜಕ್ಕೆ ವರ್ಗಾವಣೆಯಾಗಿ 5 ವರ್ಷ ಸೇವೆ ಸಲ್ಲಿಸಿದರು.2021ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿಗೊಂಡು ಮಂಗಳೂರು ಜಿ.ಪಂ.ನಲ್ಲಿ ಸಾಮಾಜಿಕ ಅರಣ್ಯ ವಲಯಕ್ಕೆ ವರ್ಗಾವಣೆಗೊಂಡರು.
ಅಲ್ಲಿಂದ ಸುಳ್ಯಕ್ಕೆ ಬಂದ ಅವರು 4 ವರ್ಷ ಸೇವೆಸಲ್ಲಿಸಿ,2025ರಲ್ಲಿ ದಕ್ಷಿಣ ಕನ್ನಡ, ಉಡುಪಿ ಅರಣ್ಯ ಸಂಚಾರಿ ದಳಕ್ಕೆ ವರ್ಗಾವಣೆಗೊಂಡಿದ್ದರು. ಇದೀಗ ಅವರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪದೋನ್ನತಿ ದೊರೆತಿದೆ.ಸಾಮೆತ್ತಡ್ಕ ನಿವಾಸಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿಯವರು ವಲಯಾರಣ್ಯಾಧಿಕಾರಿಯಾಗಿದ್ದ ದಿ.ನಾರಾಯಣ ಶೆಟ್ಟಿ-ಶ್ರೀಮತಿ ಸುಲೋಚನಾ ಶೆಟ್ಟಿ ದಂಪತಿಯ ಪುತ್ರ.




























