ಪುತ್ತೂರು:ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿ ನಿವಾಸಿ ಮಹಿಳೆಯೊಬ್ಬರು ತೀವ್ರ ಜ್ವರದಿಂದ ಆ.29ರಂದು ನಿಧನರಾಗಿರುವುದಾಗಿ ವರದಿಯಾಗಿದೆ.
ಮುದ್ದೋಡಿ ನಿವಾಸಿ ಶೇಖರ್ ಎಂಬವರ ಪತ್ನಿ ಸೌಮ್ಯ (24ವ)ರವರು ಮೃತಪಟ್ಟವರು. ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಕ್ಲಿನಿಕ್‌ನಿಂದ ಔಷಧಿ ಪಡೆದಿದ್ದರು.
ಆ.29ರಂದು ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು ಪತಿ ಶೇಖರ್, ಒಂದೂವರೆ ವರ್ಷದ ಮಗುವನ್ನು ಅಗಲಿದ್ದಾರೆ. ಮೃತ ಸೌಮ್ಯ ಅವರ ತಾಯಿ ಸೇಡಿಯಾಪು ಕಜೆ ನಿವಾಸಿ ಸುಂದರಿ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























