ವಿಟ್ಲ: ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ 49ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುದರ್ಶನ್ ಪಡಿಯಾರ್, ವಿಟ್ಲದ ಪ್ರಸಿದ್ಧ ಕೋಟಿ ಕೆರೆಯಲ್ಲಿ ಈಜು ಬಾರದೆ ನೀರಿಗೆ ಇಳಿದಿದ್ದ ಮೂವರು ಮಕ್ಕಳ ಜೀವವನ್ನು ರಕ್ಷಿಸಿದ ಮಹೇಶ್ ಬನ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿಟ್ಲ ಪಿ.ಎಂ. ಶ್ರೀ ಶಾಲೆಯ ದೈಹಿಕ ಶಿಕ್ಷಕ ವಿದ್ಯಾಶಂಕರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ಗಾಯತ್ರಿ ಗೀತಪ್ರಕಾಶ್, ವಿಟ್ಲ ಜೆಸಿಐ ಘಟಕದ ಅಧ್ಯಕ್ಷ ಸಂದೀಪ್ ವಿಟ್ಲ, ವಿಟ್ಲ ಜೈನ ಬಸದಿ ಅಧ್ಯಕ್ಷ ಜಿತೇಶ್ ಜೈನ್, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಎಂ. ಪ್ರಸಾದ್ ಶೆಟ್ಟಿ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷೆ ಶ್ವೇತಾ ರವಿಕುಮಾರ್, ಯುವಕ ಮಂಡಲದ ಅಧ್ಯಕ್ಷ ಸುಧೀರ್ ನಾಯ್ಕ, ಗೌರವಾಧ್ಯಕ್ಷ ರಮೇಶ್ ಬಿ.ಎಸ್., ಕಾರ್ಯದರ್ಶಿ ಗಂಗಾಧರ, ಕೋಶಾಧಿಕಾರಿ ಜನಾರ್ದನ ಪದ್ಮಶಾಲಿ, ವಸಂತ ಶೆಟ್ಟಿ, ಲೋಕರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ಉತ್ಸವದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಯುವಕ ಮಂಡಲದ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಯಿತು.




























